ಮಡಿಕೇರಿ, ಆ. 19: ಪ್ರಸಕ್ತ (2019-20) ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಗುರುಶಿಷ್ಯ ಪರಂಪರೆ ಯೋಜನೆಯಡಿ ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ನೃತ್ಯ ಮತ್ತು ಜಾನಪದ ಕಲಾ ಪ್ರಕಾರಗಳಲ್ಲಿ (ಜಿಲ್ಲೆಯಲ್ಲಿ ನಶಿಸಿ ಹೋಗುತ್ತಿರುವ ಕಲೆಗಳು) ಯಾವದಾದರೂ ಒಂದು. ಕಲಾ ಪ್ರಕಾರವನ್ನು ಆಯ್ಕೆ ಮಾಡಿಕೊಂಡು ಗುರುಗಳು ಕಲಿಕಾ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮವಾಗಿರುತ್ತದೆ. ಈ ಯೋಜನೆಯಲ್ಲಿ ಗುರುಗಳ ಆಯ್ಕೆ, ಕಲಾಪ್ರಕಾರದ ಆಯ್ಕೆ ಹಾಗೂ ಕಲಿಕಾ ಅಭ್ಯರ್ಥಿಗಳ ಆಯ್ಕೆಯನ್ನು ಜಿಲ್ಲಾ ಮಟ್ಟದ ಸಮಿತಿಯಲ್ಲಿ ಕೈಗೊಳ್ಳಲಾಗುವುದು. ತರಬೇತಿಯ ಅವಧಿಯಲ್ಲಿ ಗುರುಗಳಿಗೆ ಮಾಸಿಕ ರೂ. 8 ಸಾವಿರ ಹಾಗೂ ಕಲಿಕಾ ಅಭ್ಯರ್ಥಿಗಳಿಗೆ ಮಾಸಿಕ ತಲಾ ರೂ. ಒಂದು ಸಾವಿರಗಳ ಸಂಭಾವನೆಯನ್ನು ನೀಡಲಾಗುವದು.

ಪರಿಶಿಷ್ಟ ಜಾತಿ/ ಪಂಗಡದ ಗುರುಗಳಿಗೆ ಮೊದಲ ಆದ್ಯತೆ ನೀಡಲಾಗುವದು. ಒಂದು ವೇಳೆ ಲಭ್ಯವಿಲ್ಲದಿದ್ದಲ್ಲಿ ಸಾಮಾನ್ಯ ವರ್ಗದ ಗುರುಗಳನ್ನು ನೇಮಿಸಿಕೊಳ್ಳಲಾಗುವದು. ತರಬೇತಿ ಅವಧಿಯು 6 ತಿಂಗಳಾಗಿರುತ್ತದೆ. ಆಸಕ್ತ ಗುರುಗಳು ಹಾಗೂ ಕಲಿಕಾ ಅಭ್ಯರ್ಥಿಗಳು ತಮ್ಮ ಕಲಾ ಪ್ರಕಾರವನ್ನು ನಮೂದಿಸಿ ಅರ್ಜಿಯನ್ನು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಡಿಕೇರಿ, ಇಲ್ಲಿಗೆ ತಾ. 28 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ: 08272-228490 ರಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.