ಸೋಮವಾರಪೇಟೆ,ಆ.19: ಗುರು ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಭಕ್ತಿಪೂರ್ವಕ ನಮನಗಳೊಂದಿಗೆ ನಡೆಯಿತು.

ಮಾತಾ ಬಳಗದಿಂದ ಭಜನಾ ಕಾರ್ಯಕ್ರಮದೊಂದಿಗೆ ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನ ಭಟ್ ನೇತೃತ್ವದಲ್ಲಿ ಮಹೋತ್ಸವದ ಪೂಜಾ ವಿಧಿವಿಧಾನಗಳು ಜರುಗಿದವು. ದೇವಾಲಯದ ಅರ್ಚಕ ಪ್ರಸನ್ನ ಭಟ್ ಮಾತನಾಡಿ, ರಾಘವೇಂದ್ರ ಸ್ವಾಮಿಗಳು ಜ್ಞಾನ-ಭಕ್ತಿ ಎರಡರ ಮಹಾಸಂಗಮವಾಗಿದ್ದರು ಎಂದರು.

ದೇವಾಲಯದ ಅಧ್ಯಕ್ಷ ಎಸ್. ಆರ್.ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ. ವಿಜೇತ್, ಖಜಾಂಚಿ ಎಸ್. ಎನ್.ಶ್ಯಾಮ್ ಸುಂದರ್, ಎಸ್.ಎನ್. ಸೋಮಶೇಖರ್, ಎಸ್. ಡಿ.ದಿನೇಶ್, ಪ್ರೋ.ಶ್ರೀಧರ್, ಮಾತ ಬಳಗದ ಪಂಕಜಾ ಶ್ಯಾಮ್ ಸುಂದರ್, ನಳಿನಿ ಕಾಂತ್, ಪ್ರೇಮಾ ಶ್ರೀಧರ್, ಜಯಂತ್, ದೇವಿ ಬಳಗದ ಅಧ್ಯಕ್ಷೆ ಸುಮಾ ಮೊದಲಾದವರು ಪಾಲ್ಗೊಂಡಿದ್ದರು.