ಸೋಮವಾರಪೇಟೆ, ಆ. 19: ಪ್ರಕೃತಿ ವಿಕೋಪಕ್ಕೀಡಾಗಿ ಹಾನಿಗೊಂಡ ಗ್ರಾಮಗಳಾದ ಮೂವತ್ತೊಕ್ಲು, ಇಗ್ಗೋಡ್ಲು ಹಾಗೂ ಹಾಡಗೇರಿ ಗ್ರಾಮಗಳ ರೈತರಿಗೆ ಪಶು ಇಲಾಖೆಯ ವತಿಯಿಂದ ಮಾದಾಪುರದ ಇಲಾಖಾ ಆವರಣದಲ್ಲಿ ಪಶು ಆಹಾರ ವಿತರಿಸಲಾಯಿತು. ಮಾದಾಪುರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮುದಾ ಧರ್ಮಪ್ಪ ಅವರು ಪಶು ಆಹಾರವನ್ನು ವಿತರಿಸಿದರು. ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಇಲಾಖೆಯ ವೈದ್ಯ ಪಿ.ಸಿ. ಶ್ರೀದೇವ್ ಮತ್ತಿತರರು ಉಪಸ್ಥಿತರಿದ್ದರು.