ಮಡಿಕೇರಿ, ಆ. 18: ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಬಾಕ್ಸಿಂಗ್ ಸಂಸ್ಥೆ ಆಯೋಜಿಸಿದ್ದ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಮರ್ಕರಾ ಅಮೆಚೂರು ಬಾಕ್ಸಿಂಗ್ ಸಂಸ್ಥೆಯ ಕ್ರೀಡಾಪಟುಗಳು 2 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಪಡೆದಿದ್ದಾರೆ.

ಪಳಂಗೋಟು ಆರ್. ಯಶಸ್ ಬೆಳ್ಳಿ ಪದಕ, ಹೆಚ್.ಬಿ. ಆದೋಕ್ಷ ಬೆಳ್ಳಿ ಪದಕ ಹಾಗೂ ಕರ್ಕರನ ಹೇಮಂತ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಇವರು ಮುಖ್ಯ ತರಬೇತುದಾರ ಎನ್.ಸಿ. ಸುದರ್ಶನ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.