ಸೋಮವಾರಪೇಟೆ, ಆ. 18: ಪಟ್ಟಣದ ಕಕ್ಕೆಹೊಳೆ ಸಮೀಪದಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 17ನೇ ವರ್ಷದ ಶ್ರೀ ಭುವನೇಶ್ವರಿ ಹೋಮ ನಡೆಯಿತು.

ದೇವಾಲಯದ ಪ್ರಧಾನ ಅರ್ಚಕರಾದ ಮಣಿಕಂಠನ್ ನಂಬೂದರಿಯವರ ಪೌರೋಹಿತ್ಯದಲ್ಲಿ ನಡೆದ ಹೋಮ ಕಾರ್ಯದಲ್ಲಿ ಬಜೆಗುಂಡಿ ಅಯ್ಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕ ಜಗದೀಶ್ ಉಡುಪ, ಮುಳಬಾಗಿಲಿನ ಶ್ರೀರಂಗಾಚಾರಿ, ಕುಶಾಲನಗರ ಗಣಪತಿ ದೇವಾಲಯದ ಅರ್ಚಕ ರಾಘವೇಂದ್ರ ಭಟ್, ಕೂತಿ ವಾದಿರಾಜ್ ಭಟ್, ಮೈಸೂರಿನ ಕಿರಣ್ ಶಾಸ್ತ್ರಿ, ಸೋಮವಾರಪೇಟೆಯ ಚಂದ್ರಹಾಸ್ ಭಟ್, ಚಕ್ರ ಉಡುಪ, ಹಾಗೂ ಪ್ರಸಾದ್ ಭಟ್ ಇವರುಗಳು ಭಾಗವಹಿಸಿದ್ದರು.

ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಎನ್.ಡಿ. ವಿನೋದ್ ಹಾಗೂ ಪ್ರ. ಕಾರ್ಯದರ್ಶಿ ಎನ್.ಟಿ. ಪ್ರಸನ್ನ ನಾಯರ್ ಮತ್ತು ಸದಸ್ಯರುಗಳು, ಭಕ್ತಾದಿಗಳು ಉಪಸ್ಥಿತರಿದ್ದರು.