ಮಡಿಕೇರಿ, ಆ. 18: ನರಿಯಂದಡ ಗ್ರಾ.ಪಂ. ವ್ಯಾಪ್ತಿಯ ವಾರ್ಡ್ ಸಭೆ ತಾ. 20 ರಿಂದ ನಡೆಯಲಿದೆ. ತಾ. 20 ರಂದು ಅರಪಟ್ಟು ಹಾಗೂ ಪೊದವಾಡ ಗ್ರಾಮಗಳ ವಾರ್ಡ್ ಸಭೆ ಕಡಂಗ ಮಹಿಳಾ ಸಮಾಜ ಕಟ್ಟಡದಲ್ಲಿ ಬೆಳಿಗ್ಗೆ 10.30 ಗಂಟೆಗೆ, ಕರಡ ಗ್ರಾಮದ ಸಭೆ ಕರಡ ಮಹಿಳಾ ಸಮಾಜ ಕಟ್ಟಡದಲ್ಲಿ ಮಧ್ಯಾಹ್ನ 2 ಗಂಟೆಗೆ, 21 ರಂದು ಚೇಲಾವರ ವಾರ್ಡ್ ಸಭೆ ಚೇಲಾವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 10.30 ಗಂಟೆಗೆ, ನರಿಯಂದರ ಬ್ಲಾಕ್ 1 ವಾರ್ಡ್ ಸಭೆ ಚೆಯ್ಯಂಡಾಣೆ ಗ್ರಾ.ಪಂ. ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ, 22 ರಂದು ಕೋಕೇರಿ ಸಭೆ ಬೆಳಿಗ್ಗೆ 10.30 ಗಂಟೆಗೆ ಅಲ್ಲಿನ ಮಹಿಳಾ ಸಮಾಜ ಕಟ್ಟಡದಲ್ಲಿ, ಎಡಪಾಲ ವಾರ್ಡ್ ಸಭೆ ಅಪರಾಹ್ನ 2 ಗಂಟೆಗೆ ಅಲ್ಲಿನ ಅಯ್ಯಪ್ಪ ಯುವಕ ಸಂಘ ಸಮುದಾಯ ಭವನದಲ್ಲಿ ನಡೆಯಲಿದೆ.

ಗ್ರಾಮ ಸಭೆ

ನರಿಯಂದಡ ಗ್ರಾ.ಪಂ.ನ ಗ್ರಾಮ ಸಭೆಯು ತಾ. 29 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾ.ಪಂ. ಅಧ್ಯಕ್ಷೆ ಬೇಬಿ ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ಅರಪಟ್ಟು ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.