ನಾಪೆÇೀಕ್ಲು, ಆ. 17: ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರದಲ್ಲಿ ಸೇತುವೆಯೊಂದು ಮುರಿದು ಬಿದ್ದ ಕಾರಣ ಹೊಸೋಕ್ಲು ಕುಟುಂಬದ 9 ಹಾಗೂ ಬಾಕಿಲನ ಕುಟುಂಬದ 1 ಮನೆ ಸೇರಿದಂತೆ ಒಟ್ಟು 10 ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ.
ಈ ರಸ್ತೆಯು ಮಾಜಿ ಎಂ.ಎಲ್.ಸಿ ಟಿ.ಜಾನ್ ಅವರ ತೋಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಸೇತುವೆ ಮುರಿದಿರುವ ಕಾರಣ ಅಲ್ಲಿಗೂ ಕೂಡ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ. ಈ ರಸ್ತೆಯಲ್ಲಿ ಶಾಲಾ ಕಾಲೇಜು ಮಕ್ಕಳು, ಕಾರ್ಮಿಕರು ನಿತ್ಯ ಓಡಾಡುತ್ತಿದ್ದು, ಈ ಸೇತುವೆ ಮುರಿದು ಬಿದ್ದ ಕಾರಣ ಎಲ್ಲರಿಗೂ ಸಮಸ್ಯೆಯಾಗಿದೆ. ಸಂಬಂಧಿಸಿದವರು ಕೂಡಲೇ ಇವರಿಗೆ ಸುಗಮ ರಸ್ತೆ ಸಂಚಾರಕ್ಕೆ ವ್ಯವಸ್ಥೆಗೊಳಿಸಬೇಕೆಂದು ಗ್ರಾಮದ ಬಾಚಮಂಡ ತಿಲಕ್, ಮತ್ತಿತರರು ಆಗ್ರಹಿಸಿದ್ದಾರೆ. -ಪಿ.ವಿ.ಪ್ರಭಾಕರ್