ಕೂಡಿಗೆ, ಆ. 17: ರಾಜ್ಯದಲ್ಲಿ ಉಗ್ರರ ದಾಳಿ ನಡೆಯುವ ಸಾಧ್ಯತೆಯ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕುಶಾಲನಗರ ಸಮೀಪದ ಹಾರಂಗಿ ಜಲಾಶಯಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಮಾತ್ರವಲ್ಲದೆ, ಹಾರಂಗಿ ಅಣೆಕಟ್ಟೆಗೆ ಮಡಿಕೇರಿಯ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಶನಿವಾರ ಸಂಜೆ ಭೇಟಿ ನೀಡಿ ತಪಾಸಣೆ ನಡೆಸಿತು. ಹಾರಂಗಿ ಜಲಾಶಯಕ್ಕೆ ಪ್ರವಾಸಿಗರು ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದರೂ ಕೂಡ ಇದುವರೆಗೆ ಪ್ರವೇಶದ್ವಾರದಲ್ಲಿ ಯಾವದೇ ರೀತಿಯ ತಪಾಸಣಾ ಯಂತ್ರೋಪಕರಣಗಳನ್ನು ಅಳವಡಿಸಿಲ್ಲ. (ಮೊದಲ ಪುಟದಿಂದ) ಹೆಸರಿಗಷ್ಟೆ ಜಲಾಶಯಕ್ಕೆ ಮುಖ್ಯದ್ವಾರವಿದೆ. ಆದರೆ ಸುತ್ತಮುತ್ತಲ ಪ್ರದೇಶಗಳಿಂದ ನಿರಾಯಾಸವಾಗಿ ಕಿಡಿಗೇಡಿಗಳು ಜಲಾಶಯಕ್ಕೆ ಪ್ರವೇಶಿಸಲು ಅವಕಾಶ ವಿದ್ದು, ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಬೇಕಿದೆ.
ಎಆರ್ಎಸ್ಐ ಜಿತೇಂದ್ರ ರೈ, ಸಿಬ್ಬಂದಿಗಳಾದ ಸುಕುಮಾರ್, ರಂಗನಾಥ್, ಗುರುಪ್ರಸಾದ್, ಇವರು ಗಳು ಶ್ವಾನ ರ್ಯಾಂಬೊ ಜಲಾಶಯದ ತಪಾಸಣೆ ಮಾಡಿದರು. -ಕೆ.ಕೆ.ಎನ್.