ಮಡಿಕೇರಿ, ಆ. 17: 2019-20ನೇ ಸಾಲಿನ ಆಗಸ್ಟ್ ತಿಂಗಳಲ್ಲಿ ಅತೀ ಹೆಚ್ಚು ಮಳೆಯಿಂದ ಶಾಲೆಗಳಿಗೆ ರಜೆ ನೀಡಿದ್ದು; ಈ ರಜೆಯನ್ನು ಸರಿದೂಗಿಸ ಬೇಕಾಗಿರುವದರಿಂದ ಮುಂದಿನ 13 ಶನಿವಾರಗಳು ಪೂರ್ಣ ಅವಧಿಯ ತರಗತಿಗಳನ್ನು ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ನಡೆಸುವಂತೆ (ಸಾರ್ವತ್ರಿಕ ರಜೆಗಳನ್ನು ಹೊರತುಪಡಿಸಿ) ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.