ವೀರಾಜಪೇಟೆ, ಆ. 17: ವೀರಾಜಪೇಟೆ ವಿಭಾಗದಲ್ಲಿ ಸುರಿದ ಭಾರೀ ಮಳೆಗೆ ಆರು ದಿನಗಳ ಹಿಂದೆ ಇಲ್ಲಿನ ಸಿದ್ದಾಪುರ ರಸ್ತೆಯಲ್ಲಿರುವ ಮಲೆತಿರಿಕೆ ಬೆಟ್ಟದ ಒಂದು ಭಾಗದಲ್ಲಿ ಬಿರುಕು ಬಿಟ್ಟಿದ್ದ ಭಾರತೀಯ ಸರ್ವೇಕ್ಷಣಾ ಇಲಾಖೆಯ ಇಬ್ಬರು ವಿಜ್ಞಾನಿಗಳಾದ ಸುನಂದನ್ ಬಾಸು ಹಾಗೂ ಕಪಿಲ್ ಸಿಂಗ್ ಅವರು ಇಂದು ಖುದ್ದು ಪರಿಶೀಲಿಸಿದರು.ಭಾರೀ ಮಳೆಯ ಪರಿಣಾಮವಾಗಿ ಮಲೆತಿರಿಕೆ ಬೆಟ್ಟದ ತಪ್ಪಲಿನಿಂದ ಕಲ್ಲುಗಳ ಸೆರೆಯಲ್ಲಿ ಬಂದ ನೀರು ಹರಿದುದರಿಂದ ಬೆಟ್ಟದಲ್ಲಿ ಮಣ್ಣು ತೇವಗೊಂಡು ಬಿರುಕುಗೊಳ್ಳಲು ಸಾಧ್ಯವಾಗಿದೆ. ಮುಂದೆ ಭಾರೀ ಮಳೆ ತಪ್ಪಲಿನಿಂದ ಕಲ್ಲುಗಳ ಸೆರೆಯಲ್ಲಿ ಬಂದ ನೀರು ಹರಿದುದರಿಂದ ಬೆಟ್ಟದಲ್ಲಿ ಮಣ್ಣು ತೇವಗೊಂಡು ಬಿರುಕುಗೊಳ್ಳಲು ಸಾಧ್ಯವಾಗಿದೆ. ಮುಂದೆ ಭಾರೀ ಮಳೆ ಮುಂದುವರಿದರೆ ಭೂಮಿ ಬಿರುಕು ಮುಂದುವರೆಯಲಿದೆ. ಬೆಟ್ಟದಲ್ಲಿ ಕಲ್ಲು ಬಂಡೆ, ಕಲ್ಲುಗಳು ಹೆಚ್ಚಾಗಿರುವದರಿಂದ ಬೆಟ್ಟಹಾಗೂ ಮಣ್ಣು ಕುಸಿಯುವ ಆತಂಕವಿಲ್ಲ. ಈಗ ಬಿರುಕು ಬಿಟ್ಟ ಸ್ಥಳದಿಂದ ಮುಂದೆಯೂ ಭೂ ಕುಸಿಯಲಿದೆ
(ಮೊದಲ ಪುಟದಿಂದ) ಎಂಬ ಮುನ್ನೆಚ್ಚರಿಕೆಗಾಗಿ ಬಿರುಕು ಕಂಡ ಕೆಳಗಿನ ಸ್ಥಳದಲ್ಲಿ ಸಾಧ್ಯವಾದರೆ ರಕ್ಷಣೆಗಾಗಿ ತಡೆಗೋಡೆ ನಿರ್ಮಿಸಬೇಕು. ಬಿರುಕು ಕಂಡ ಸ್ಥಳದ ಆಜುಬಾಜಿನಲ್ಲಿ ಮನೆ ನಿರ್ಮಿಸದಂತೆ ಎಚ್ಚರ ವಹಿಸಬೇಕು ಎಂದು ಸುನಂದನ್ ಬಾಸು ಹೇಳಿದರು.
ವಿಜ್ಞಾನಿಗಳ ಜೊತೆಯಲ್ಲಿ ಬಿರುಕು ಬಿಟ್ಟ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಜಾಯ್ ಕಣ್ಮಣಿ ಅವರು ಮಲೆತಿರಿಕೆ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡ ನಂತರ ಬೆಟ್ಟದಲ್ಲಿ ವಾಸಿಸುತ್ತಿದ್ದ 54 ಕುಟುಂಬಗಳನ್ನು ತುರ್ತು ಪರಿಹಾರ ಕೇಂದ್ರಕ್ಕೆ ಸಾಗಿಸಲಾಗಿದೆ. ವೀರಾಜಪೇಟೆ ವಿಭಾಗದಲ್ಲಿ ಮಳೆ ಕಡಿಮೆಯಾಗುವ ತನಕ ಆಗಸ್ಟ್ 31ರವರೆಗೆ ಪರಿಹಾರ ಕೇಂದ್ರದಲ್ಲಿ ಈ ಕುಟುಂಬಗಳಿಗೆ ಆಶ್ರಯ ಮುಂದುವರೆಸಲಾಗುವದು. ತಜ್ಞ ಭೂ ವಿಜ್ಞಾನಿಗಳ ಮತ್ತೊಂದು ತಂಡ ಮಲೆತಿರಿಕೆಬೆಟ್ಟದ ಬಿರುಕು ಬಿಟ್ಟ ಸ್ಥಳವನ್ನು ಸಧ್ಯದಲ್ಲಿಯೇ ಖುದ್ದು ಪರಿಶೀಲಿಸಲಿದೆ. ಬೆಟ್ಟದಲಿರುವ ನಿವಾಸಿಗಳಿಗೆ ವಿವಿಧ ಹಂತಗಳಲ್ಲಿ ಪರಿಹಾರ ಒದಗಿಸಲಾಗುವದು ಎಂದರು.
ತೋರ ಗ್ರಾಮದ ಕೊರ್ತಿಕಾಡುವಿ ನಲ್ಲಿ ಭಾರೀ ಮಳೆಗೆ ಹತ್ತು ಮಂದಿ ನಾಪತ್ತೆಯಾಗಿ ನಾಲ್ವರ ಮೃತದೇಹ ಪತ್ತೆಯಾದ ನಂತರ ಇನ್ನೂ ಆರು ಮಂದಿ ಮೃತದೇಹಕ್ಕಾಗಿ ಶೋಧ ಮುಂದುವರೆದಿದೆ. ಎನ್.ಡಿ.ಆರ್. ಎಫ್. ವಿವಿಧ ತಂಡಗಳು, ಅಧಿಕಾರಿಗಳು ಸೇರಿದಂತೆ ಒಟ್ಟು 120ಮಂದಿ ಶೋಧ ಕಾರ್ಯದಲ್ಲಿ ಮುಂದುವರೆದಿದ್ದಾರೆ ಎಂದರು.
ಮಲೆತಿರಿಕೆಬೆಟ್ಟದಿಂದ ಇಲ್ಲಿನ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಅನಿಶ್ ಜಾಯ್ ಅವರು ವೀರಾಜಪೇಟೆಯಲ್ಲಿರುವ ಪರಿಹಾರ ಕೇಂದ್ರಕ್ಕೆ ಸಂಬಂಧಿಸಿದಂತೆ ತಾಲೂಕು ತಹಶೀಲ್ದಾರ್ ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಡಿಕೇರಿಗೆ ತೆರಳಿದರು.
ಭೂ ವಿಜ್ಞಾನಿಗಳ ಜೊತೆಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಪಿ.ಡಬ್ಲ್ಯುಡಿ ಸಹಾಯಕ ಅಭಿಯಂತರ ಎಂ. ಸುರೇಶ್, ಐ.ಎ.ಎಸ್ ಅಧಿಕಾರಿ ಸುಮೇಶ್, ತಹಶೀಲ್ದಾರ್ ಪುರಂದರ, ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ. ರಾಜೇಶ್, ಮತ್ತಿತರರು ಹಾಜರಿದ್ದರು.
ನೆಹರೂ ನಗರದಲ್ಲಿ ಪರಿಶೀಲನೆ
ವೀರಾಜಪೇಟೆ ಬಳಿಯ ನೆಹರೂನಗರದ ಅಂಗನವಾಡಿ ಕೇಂದ್ರದ ಬಳಿಯ ಶಶಿ ಎಂಬವರ ಮನೆ ಮೇಲ್ಭಾಗದ ಭೂಮಿಯಲ್ಲಿ ನಾಲ್ಕು ದಿನಗಳ ಹಿಂದೆ ಬಿರುಕು ಕಂಡ ಸ್ಥಳಕ್ಕೆ ಇಂದು ಭೂ ಸರ್ವೇಕ್ಷಣಾ ಇಲಖೆ ತಜ್ಞರಾದ ಸುನಂದನ್ ಬಾಸು ಹಾಗೂ ಕಪಿಲ್ ಸಿಂಗ್ ಭೇಟಿ ನೀಡಿ ಪರಿಶೀಲಿಸಿದರು. ಬೆಟ್ಟ ಪ್ರದೇಶದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಬೆಟ್ಟ ಪ್ರದೇಶದಲ್ಲಿ ಹುಟ್ಟುವ ಜಲದ ನೀರು ಭೂಮಿಯೊಳಗೆ ಹರಿದುದರಿಂದ ವೀರಾಜಪೇಟೆಯ ಸಿದ್ದಾಪುರ ರಸ್ತೆಯ ಮೇಲ್ಭಾಗದಲ್ಲಿರುವ ಮಲೆತಿರಿಕೆಬೆಟ್ಟ ವಿಶಾಲವಾಗಿದ್ದು ಈಶ್ವರ, ಅಯ್ಯಪ್ಪ ಹಾಗೂ ಶನೀಶ್ವರ ದೇವಾಲಗಳನ್ನು ಹೊಂದಿದೆ. ಪಟ್ಟಣ ಪ್ರದೇಶದಲ್ಲಿ ಪೈಸಾರಿ ಜಾಗದ ಅಭಾವದಿಂದಾಗಿ ಕಳೆದ ಮೂರು ದಶಕಗಳಿಂದ ನಿವೇಶನ ರಹಿತರಿಗೆ ಮಲೆತಿರಿಕೆಬೆಟ್ಟದಲ್ಲಿ ಜಾಗ ಮಂಜೂರು ಮಾಡಿ ಮನೆ ಕಟ್ಟಲು ಸರಕಾರದಿಂದ ಅನುಮತಿ ನೀಡಲಾಯಿತು. ಅದರಂತೆ ಮಲೆತಿರಿಕೆ ಬೆಟ್ಟದಲ್ಲಿ 54 ಕುಂಟುಂಬಗಳು, ಅರಸುನಗರದಲ್ಲಿ 31 ಕುಟುಂಬಗಳು ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಬಿದ್ದ ಭಾರೀ ಮಳೆಗೆ ಕೆಲವು ಮನೆಗಳು ಭಾಗಶಃ ಕುಸಿದಿದ್ದವು. ಜಖಂಗೊಂಡ ಮನೆಗಳ ಕುಟುಂಬಗಳನ್ನು ತಾತ್ಕಾಲಿಕವಾಗಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಈಗ ಮಲೆತಿರಿಕೆಬೆಟ್ಟದಲ್ಲಿ ಬಿರುಕು ಕಂಡ ತಕ್ಷಣ ಜಿಲ್ಲಾಧಿಕಾರಿಯ ಆದೇಶದ ಮೇರೆ ಬೆಟ್ಟದಲ್ಲಿ ವಾಸಿಸುವ ಎಲ್ಲ ಕುಟುಂಬಗಳನ್ನು ಸ್ಥಳಾಂತರಿಸ ಲಾಗಿದೆ.
ಮಲೆತಿರಿಕೆಬೆಟ್ಟ ವ್ಯಾಪ್ತಿಯ ಸಿದ್ದಾಪುರ ರಸ್ತೆಯಲ್ಲಿ ಸುಂಕದ ಕಟ್ಟೆ ತಿರುವಿನಲ್ಲಿ ಕಳೆದ ಅನೇಕ ವರ್ಷಗಳ ಹಿಂದೆಯೇ ಕೊಡಗು ದಂತ ಮಹಾ ವಿದ್ಯಾಲಯ ಸ್ಥಾಪನೆಗೊಂಡು ಕಾರ್ಯ ನಿರ್ವಹಿಸುತ್ತಿದೆ. ಇದರ ಜೊತೆಯಲ್ಲಿ ನರ್ಸಿಂಗ್ ತರಬೇತಿ ಕೇಂದ್ರ, ಅಡುಗೆ ಅನಿಲ ವಿತರಣಾ ದಾಸ್ತಾನು ಕೇಂದ್ರದ ಕಾರ್ಯಾಲಯ, ಖಾಸಗಿ ಶಾಲಾ ಕಟ್ಟಡ, ಹೊಸದಾಗಿ ರೆಸಾರ್ಟ್ ನಿರ್ಮಾಣದ ಕಾಮಗಾರಿ ಇದೇ ಬೆಟ್ಟದಲ್ಲಿ ನಡೆಯುತ್ತಿದೆ.
ಕಳೆದ 1962ರಲ್ಲಿ ವೀರಾಜಪೇಟೆಗೆ ಬಿದ್ದ ಭಾರೀ ಮಳೆಗೆ ಮಲೆತಿರಿಕೆಬೆಟ್ಟದ ಸಿದ್ದಾಪುರ ರಸ್ತೆ ಬದಿಯಿಂದ ಸುಮಾರು 200 ಮೀಟರ್ ಎತ್ತರದಲ್ಲಿ ಮಣ್ಣು ಕುಸಿದು ಭಾರೀ ದೊಡ್ಡ ಹೊಂಡ ಮಾಡಿ ಸದ್ದು ಮಾಡಿತ್ತು. ನಂತರ ಮಳೆಗಾಲದಲ್ಲಿ ಮಲೆತಿರಿಕೆಬೆಟ್ಟದ ಮೇಲ್ಭಾಗದಲ್ಲಿ ಮನೆ ಕಟ್ಟಿಕೊಂಡಿದ್ದ ಕೆಲವು ಮನೆಗಳು ಭಾಗಶಃ ಕುಸಿದಿದ್ದವು.
ಮಲೆತಿರಿಕೆಬೆಟ್ಟದಲ್ಲಿ ಭೂಮಿ ಬಿರುಕು ಎಂದು ಪ್ರಚಾರವಾಗುತ್ತಲೇ ಪಟ್ಟಣದ ಜನತೆ ಕಂಗಾಲಾಗಿದ್ದರು. ವಿಜ್ಞಾನಿಗಳ ಇಂದಿನ ಪರಿಶೀಲನೆಯಿಂದ ಬೆಟ್ಟ ಜಾರುವ ಸಂಭವವಿಲ್ಲ. ಯಾರೂ ಆತಂಕ ಪಡಬೇಕಾಗಿಲ್ಲ ಎಂಬ ವಿಜ್ಞಾನಿಗಳ ಹೇಳಿಕೆಯಿಂದ ಎಲ್ಲರೂ ಸಮಧಾನ ಪಡುವಂತಾಗಿದೆ.