ಮಡಿಕೇರಿ, ಆ. 16: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜ್‍ನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಡಾ. ಪಾರ್ವತಿ ಅಪ್ಪಯ್ಯ ನ್ಯಾಕ್ ಪೀಯರ್ ಟೀಂನಲ್ಲಿ ಮೌಲ್ಯ ಮಾಪಕರಾಗಿ ಆಯ್ಕೆಯಾಗಿದ್ದಾರೆ.

ಎನ್‍ಎಎಸಿ ಸಂಸ್ಥೆಯು ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ಪೀಯರ್ ಟೀಂ ಅನ್ನು ಆಯ್ಕೆ ಮಾಡುತ್ತಿದೆ. ಡಾ. ಪಾರ್ವತಿ ಅಪ್ಪಯ್ಯ ಈಗಾಗಲೇ ನಾಗಪುರದಲ್ಲಿರುವ ಮಹಿಳಾ ಕಾಲೇಜು, ಪೂನಾದಲ್ಲಿರುವ ವಾಯಿರೆ ಕಾಲೇಜಿನ ಕಲಾ ವಿಭಾಗ, ವಿಜ್ಞಾನ ವಿಭಾಗ ಮತ್ತು ವಾಣಿಜ್ಯ ವಿಭಾಗಕ್ಕೆ ಭೇಟಿ ನೀಡಿ ಮೌಲ್ಯ ಮಾಪನವನ್ನು ಪೂರ್ಣಗೊಳಿಸಿದ್ದಾರೆ. ಉಳಿದಂತೆ ಮಧ್ಯಪ್ರದೇಶದ ಹಾಗೂ ಹರಿಯಾಣದಲ್ಲಿರುವ ಕಾಲೇಜುಗಳಿಗೆ ಇದೇ ತಿಂಗಳು ಭೇಟಿ ನೀಡಲಿದ್ದಾರೆ.