ಗುಡ್ಡೆಹೊಸೂರು, ಆ. 16: ಕಾವೇರಿ ನದಿ ಪ್ರವಾಹದಿಂದ ನಿರಾಶ್ರಿತರಾದ ತೆಪ್ಪದ ಕಂಡಿ ಬಳಿಯ ಸುಮಾರು 32 ಕುಟುಂಬದವರು ಇಲ್ಲಿನ ಶಾಲಾ ಆವರಣದಲ್ಲಿ ತಂಗಿದ್ದಾರೆ. ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ಈ ವಿಭಾಗದ ವೈದ್ಯ ಡಾ. ಚೇಚನ್ ಮೆಡತನ ಅವರು ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮದ ಬಗ್ಗೆ ಅಲ್ಲಿನ ಜನರಿಗೆ ವಿವರಿಸಿದರು. ಈ ಸಂದರ್ಭ ಆರೋಗ್ಯ ಕಾರ್ಯಕರ್ತೆ ನೀಲಮ್ಮ, ಆಶಾ ಕಾರ್ಯಕರ್ತೆ ರುಕ್ಮಿಣಿ, ತಾ.ಪಂ. ಸದಸ್ಯೆ ಪುಷ್ಪ, ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ, ಸದಸ್ಯರಾದ ಕವಿತಾ, ಡಾಟಿ, ಪಾರ್ವತಿ, ಗಂಗೆ ಮುಂತಾದವರು ಹಾಜರಿದ್ದರು.
ಶಾಸಕ ಅಪ್ಪಚ್ಚು ರಂಜನ್ ಕೇಂದ್ರಕ್ಕೆ ಆಗಮಿಸಿ ಅಡುಗೆ ಮನೆಯನ್ನು ವೀಕ್ಷಿಸಿ. ನಿವಾಸಿಗಳ ಆರೋಗ್ಯ ವಿಚಾರಿಸಿದರು. ಅಲ್ಲದೆ ಈ ವಿಭಾಗದ ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್ ಭೇಟಿ ನೀಡಿ ಉಟದ ವ್ಯವಸ್ಥೆಗೆ ಪದಾರ್ಥಗಳನ್ನು ನೀಡಿದ್ದಾರೆ. ಗುಡ್ಡೆಹೊಸೂರಿನ ಪಿ.ಡಿ.ಓ. ಸ್ಥಳದಲ್ಲಿದ್ದು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ನೋಡಲ್ ಅಧಿಕಾರಿಯಾಗಿ ಬಾಲಕೃಷ್ಣ ಕಾರ್ಯ ನಿರ್ವಹಿಸುತ್ತಿದ್ದಾರೆ.