ಸುಂಟಿಕೊಪ್ಪ, ಆ. 16: ಸುಂಟಿಕೊಪ್ಪದ ಸುತ್ತಮುತ್ತಲಿನ ತೋಟಗಳಲ್ಲಿ ಕಾಡಾನೆಗಳು ದಾಳಿ ಮಾಡುತ್ತಿದ್ದು ಫಸಲುಗಳು ಅಪಾರ ನಷ್ಟ ಸಂಭವಿದೆ ಎಂದು ತೋಟದ ಮಾಲೀಕರು ತಿÀಳಿಸಿದ್ದಾರೆ

ಇಲ್ಲಿನ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಕೊಳಂಬೆ ರವಿ ಅವರಿಗೆ ಸೇರಿದ ನಾಟಿ ಮಾಡಿದ ಗದ್ದೆ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ತೋಟದಲ್ಲಿರುವ ಬಾಳೆ ತೋಟ ತೆಂಗು ಅಡಿಕೆ ಫಸಲುಗಳನ್ನು ನಷ್ಟಪಡಿಸಿವೆ.

ಕಳೆದ ಹಲವು ದಿನಗಳಿಂದ ಕಾನ್ ಬೈಲು ಅಂದಗೋವೆ ಕೊಳಂಬೆ ಗ್ರಾಮದಲ್ಲಿ ಕಾಡಾನೆಗಳ ಗುಂಪು ಸುತ್ತಾಡುತ್ತಿದ್ದು ಕಾಡಾನೆಗಳು ಸಂಚರಿಸುವ ಸ್ಥಳಗಳಲ್ಲಿ ಕಾಫಿ ಗಿಡಗಳು ಸಂಪೂರ್ಣ ಹಾಳಾಗುತ್ತಿವೆ ಎಂದು ಬೆಳೆಗಾರ ರವಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಅಂಬೆಕಲ್ ಚಂದ್ರಶೇಖರ್ ಅರಣ್ಯ ಇಲಾಖೆಯವರಿಗೆ ಕಾಡಾನೆಗಳನ್ನು ಕಾಡಿಗೆ ಅಟ್ಟುವಂತೆ ತಿಳಿಸಿದ್ದಾರೆ.