ಕೂಡಿಗೆ, ಆ. 14: ಹುದುಗೂರು ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ತಾ. 18 ಮಹಾ ಮೃತ್ಯುಂಜಯ ಹೋಮ ನಡೆಯಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ಕಲಶ ಪೂಜೆ, ಗಣಪತಿ ಹೋಮ, 8 ಗಂಟೆಗೆ ಮೃತ್ಯುಂಜಯ ಯಜ್ಞ , 12 ಗಂಟೆಗೆ ಅಲಂಕಾರ ಪೂಜೆ, ಮಹಾಮಂಗಳಾರತಿ ನಂತರ ಅನ್ನದಾನ ಸೇರಿದಂತೆ ವಿಶೇಷ ಪೂಜೆ ಕಾರ್ಯಕ್ರಮ ನಡೆಯಲಿವೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ ತಿಳಿಸಿದ್ದಾರೆ.