ಜಮ್ಮು ಪ್ರದೇಶದಲ್ಲಿ ನಿರ್ಬಂಧ ತೆರವು ಶ್ರೀನಗರ, ಆ. 14: ಆರ್ಟಿಕಲ್ 370 ರದ್ದುಗೊಂಡ ನಂತರ ವಿಧಿಸಲಾಗಿದ್ದ ನಿರ್ಬಂಧವನ್ನು ಜಮ್ಮು ಪ್ರದೇಶದಲ್ಲಿ ಸಂಪೂರ್ಣ ತೆರವುಗೊಳಿಸಲಾಗಿದ್ದು, ಕಾಶ್ಮೀರದ ಕೆಲವೆಡೆ ಮುಂದುವರೆಸಲಾಗಿದೆ. ಕಾಶ್ಮೀರದ ಪೆÇಲೀಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಜಮ್ಮು-ಕಾಶ್ಮೀರದ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಅಹಿತಕರ ಘಟನೆಗಳು ನಡೆದಿಲ್ಲ ಎಂದು ಹೆಚ್ಚುವರಿ ಪೆÇಲೀಸ್ ನಿರ್ದೇಶಕ ಮುನೀರ್ ಖಾನ್ ಹೇಳಿದ್ದಾರೆ. ಕೆಲವರಿಗೆ ಪೆಲೆಟ್ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ, ಕಾಶ್ಮೀರದ ಕೆಲವೆಡೆ ಇನ್ನೂ ಕೆಲವು ಕಾಲ ನಿರ್ಬಂಧ ಮುಂದುವರೆಸಲಾಗುತ್ತದೆ ಎಂದು ಪೆÇಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಯುದ್ಧದ ಎಚ್ಚರಿಕೆ ನೀಡಿದ ಪಾಕ್ ಪ್ರಧಾನಿ ಇಸ್ಲಾಮಾಬಾದ್, ಆ. 14: ಜಮ್ಮು ಮತ್ತು ಕಾಶ್ಮೀರದ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಭಾರತ ಸರ್ಕಾರದ ನಿರ್ಧಾರದ ವಿರುದ್ಧ ಯುದ್ಧ ಸಾರಬೇಕಾದೀತು ಎಂದೂ ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ. ಖಾನ್ ತಮ್ಮ ಇತ್ತೀಚಿನ ಭಾಷಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತ, ದೇಶದ ಮುಸ್ಲಿಮರನ್ನು ಬೀದಿಯಲ್ಲಿ ಹತ್ಯೆ ಮಾಡುತ್ತಿರುವದರ ಬಗ್ಗೆ ಪ್ರಸ್ತಾಪ ಮಾಡಿ, ಜೊತೆಗೆ ಕಾಶ್ಮೀರ ಕಣಿವೆಯ ಪ್ರಸ್ತುತ ಬೆಳವಣಿಗೆಗಳು ಆತಂಕಕಾರಿ ಎಂದು ಹೇಳಿದ್ದರು. ಕಾಶ್ಮಿರದ ಸ್ವಾತಂತ್ರ್ಯಕ್ಕಾಗಿ ಅಲ್ಲಿನ ಜನರ ಬದುಕಿಗಾಗಿ, ಪಾಕ್ ಸೇನೆ ಮತ್ತು ಜನತೆ ಎಲ್ಲದಕ್ಕೂ ಸಿದ್ಧರಾಗಿದ್ದಾರೆ ಎಂದು ಅವರು ಹೇಳಿದರು. ಭಾರತ ಕಾರ್ಯತಂತ್ರದ ಪ್ರಮಾದ ಮಾಡಿದೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ಅಂತಿಮ ಆಟ ಆಡುತ್ತಿದ್ದಾರೆ. ಆದರೆ ಅದು ಭಾರತಕ್ಕೆ ತುಂಬಾ ದುಬಾರಿಯಾಗಲಿದೆ ಎಂದು ಹೇಳಿದರು. ಕಾಶ್ಮೀರ ಅಂತರರಾಷ್ಟ್ರೀಯ ಸಮುದಾಯದ ರಾಡಾರ್‍ನಲ್ಲಿ ಇರಲಿಲ್ಲ, ಆದರೆ ಜಾಗತಿಕ ನಿರೂಪಣೆಯಲ್ಲಿ ಕಾಶ್ಮೀರ ವಿಷಯ ಇರುವಾಗ ನಾನು ಕಾಶ್ಮೀರದ ರಾಯಭಾರಿಯಾಗುವದಾಗಿ ಪ್ರತಿಜ್ಞೆ ಮಾಡುವದಾಗಿಯೂ ಇಮ್ರಾನ್ ಖಾನ್ ಹೇಳಿದ್ದಾರೆ. ಈಗ, ನಾನು ಬ್ರಾಂಡ್ ಅಂಬಾಸಿಡರ್ ಆಗಿ ಕಾಶ್ಮೀರ ಸಮಸ್ಯೆಯನ್ನು ಜಗತ್ತಿನ ಎಲ್ಲಾ ವೇದಿಕೆಗಳಿಗೆ ಕೊಂಡೊಯ್ಯುತ್ತೇನೆ ಎಂದು ಖಾನ್ ಹೇಳಿದರು. ಭಾರತದಲ್ಲಿ ವಾಸಿಸುತ್ತಿರುವ ಸುಮಾರು 18 ಕೋಟಿ ಮುಸ್ಲಿಮರಿಗೆ ಆಗುವ ಅಪಾಯವನ್ನು ಉಲ್ಲೇಖಿಸಿ ಭಾರತದಲ್ಲಿನ ಕಾಶ್ಮೀರಿ ರಾಜಕಾರಣಿಗಳು ಇಂದು ಎರಡು ರಾಷ್ಟ್ರ ಸಿದ್ಧಾಂತವನ್ನು ಅನುಮೋದಿಸುತ್ತಿದ್ದಾರೆ ಎಂದೂ ಇಮ್ರಾನ್ ಖಾನ್ ದೂರಿದರು.

ಅಭಿನಂದನ್ ವರ್ತಮಾನ್‍ಗೆ ವೀರಚಕ್ರ ಪ್ರಶಸ್ತಿ

ನವದೆಹಲಿ, ಆ. 14: ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರದ ಬೆಳವಣಿಗೆಯಲ್ಲಿ ಪಾಕಿಸ್ತಾನ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ ಭಾರತಕ್ಕೆ ವಾಪಸ್ಸಾಗಿದ್ದ ಯೋಧ ಅಭಿನಂದನ್ ವರ್ತಮಾನ್‍ಗೆ ತಾ. 15 ರಂದು (ಇಂದು) ವೀರಚಕ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಫೆ. 27 ರಂದು ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಮಿಗ್-21 ನ್ನು ಹೊಡೆದುರುಳಿಸಿ ಅಪಾಯ ಸನ್ನಿವೇಶವನ್ನು ಎದುರಿಸಿ ಪಾರಾಗಿ ಬಂದಿದ್ದರು. ಹಳೆಯ ಮಿಗ್-21 ಯುದ್ಧವಿಮಾನದಿಂದ ಅತ್ಯಾಧುನಿಕ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದ ಅಭಿನಂದನ್ ಸಾಹಸಕ್ಕೆ ತಜ್ಞರು ಬೆರಗಾಗಿದ್ದರು. ಪರಮ ವೀರಚಕ್ರ, ಮಹಾವೀರ ಚಕ್ರದ ನಂತರ ಯೋಧರ ಸಾಹಸ, ಶೌರ್ಯಗಳನ್ನು ಗುರುತಿಸಿ ನೀಡಲಾಗುವ 3ನೇ ಅತಿ ಶ್ರೇಷ್ಠ ಪ್ರಶಸ್ತಿ ವೀರ ಚಕ್ರವಾಗಿದೆ.

ಹೆಚ್‍ಡಿಕೆ ವಿರುದ್ಧ ಫೋನ್ ಕದ್ದಾಲಿಕೆ ಆರೋಪ

ಮೈಸೂರು, ಆ. 14: ರಾಜ್ಯದಲ್ಲಿನ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪತ್ರಕರ್ತರು ಸೇರಿ 300ಕ್ಕೂ ಹೆಚ್ಚು ಜನರ ದೂರವಾಣಿ ಕದ್ದಾಲಿಕೆಯನ್ನು ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರ ಮಾಡಿದೆ ಎಂದು ಅನರ್ಹ ಶಾಸಕ ಅಡಗೂರು ಹೆಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರದೇ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದ ನನ್ನ ಮತ್ತು ನನ್ನ ಪತ್ನಿಯ ಟೆಲಿಫೆÇೀನ್ ಕದ್ದಾಲಿಕೆ ಮಾಡಿ ನನ್ನ ಸ್ವಾತಂತ್ರ್ಯ ಹರಣ ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ನಾವು 17 ಜನ ಶಾಸಕರ ಫೆÇೀನ್‍ಗಳ ಜೊತೆ, ಕೆಲವು ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪತ್ರಕರ್ತರ ಫೆÇೀನ್ ಕದ್ದಾಲಿಕೆ ಮಾಡಲಾಗಿದೆ. ಹಿಂದಿನ ಗುಪ್ತಚರ ಇಲಾಖೆಯನ್ನು ಕುಮಾರಸ್ವಾಮಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಅಧಿಕಾರಿಗಳ ಸಹಕಾರವಿಲ್ಲದೆ ಈ ಕೆಲಸ ನಡೆದಿಲ್ಲ, ಇದಕ್ಕೆ ಕಾರಣರಾಗಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಮಾಡಬೇಕು ಎಂದು ಆಗ್ರಹಿಸಿದರು. ಒಬ್ಬ ವ್ಯಕ್ತಿಯ ಚಾರಿತ್ರ್ಯಹರಣ ಮಾಡುವದು ಅಪರಾಧ, ಮುಖ್ಯಮಂತ್ರಿಯಾಗಿದ್ದ ವೇಳೆ ಕುಮಾರಸ್ವಾಮಿ ಸ್ವತಃ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ವೆಂಕಟೇಶ್ ಅವರ ಫೆÇೀನನ್ನು ಕದ್ದಾಲಿಕೆ ಮಾಡಿದ್ದಾರೆ.

ಡಾ. ಎಸ್.ಎಲ್. ಭೈರಪ್ಪರಿಂದ ದಸರಾ ಉದ್ಘಾಟನೆ

ಬೆಂಗಳೂರು, ಆ. 14: ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಖ್ಯಾತ ಸಾಹಿತಿ, ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮೈಸೂರು ದಸರಾ ಉತ್ಸವದ ಕುರಿತಾಗಿ ಉನ್ನತ ಮಟ್ಟದ ಸಭೆ ನಡೆಯಿತು. ಪ್ರಸ್ತುತ ಕರ್ನಾಟಕ ಪ್ರವಾಹ ಪರಿಸ್ಥಿತಿಗೆ ತುತ್ತಾಗಿದ್ದು ಈ ಹಿನ್ನೆಲೆ ಸರಳವಾಗಿ ದಸರಾ ಆಚರಣೆಗೆ ತೀರ್ಮಾನಿಸ ಲಾಯಿತು. ಇನ್ನು ದಸರಾ ಉದ್ಘಾಟನೆಗೆ ಎಸ್.ಎಲ್. ಭೈರಪ್ಪನವರಿಗೆ ಆಹ್ವಾನ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.