ಮಡಿಕೇರಿ, ಆ. 15: ಕಳೆದ ಮೇ ತಿಂಗಳಿನಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ಅಮ್ಮತ್ತಿ ಹಾಗೂ ಮೂರ್ನಾಡು ಶಾಖೆಯ ವಿದ್ಯಾರ್ಥಿಗಳು ಹಾಜರಾಗಿದ್ದು, ಇದೀಗ ಈ ನೃತ್ಯ ಸಂಸ್ಥೆಗೆ ಶೇ. 100 ರ ಫಲಿತಾಂಶವನ್ನು ತಂದುಕೊಟ್ಟಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕಿ ವಿಧುಷಿ ಹೇಮಾವತಿ ಕಾಂತ್‍ರಾಜ್ ತಿಳಿಸಿದ್ದಾರೆ.