vಮಡಿಕೇರಿ, ಆ. 15: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಯು 2007 ರಿಂದ ವಿವಿಧ ವಿಶ್ವ ವಿದ್ಯಾನಿಲಯದ ಸಹಯೋಗ ದೊಂದಿಗೆ ವಿಜ್ಞಾನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ. ಪ್ರಸಕ್ತ ವರ್ಷ ಬೇಸಿಕ್ ಪ್ರಿನ್ಸ್ಪಲ್ಸ್ ಮತ್ತು ಅಪ್ಲಿಕೇಷನ್ಸ್ ಆಫ್ ಜಿಯೋ ಇನ್ಪಾರ್ಮೆಟಿಕ್ಸ್’ ವಿಷಯದ ಮೇಲೆ ತಾ. 27 ರಿಂದ 29 ರ ವರೆಗೆ 3 ದಿನಗಳ ವಿಶೇಷ ಉಪನ್ಯಾಸ ಮಾಲೆ ಕಾರ್ಯಾಗಾರವನ್ನು ಇಸ್ರೋ ಸಂಸ್ಥೆಯ ಪ್ರಾದೇಶಿಕ ಕೇಂದ್ರವಾದ ರೀಜನಲ್ ರಿಮೋಟ್ ಸೆನ್ಸಿಂಗ್ ಸೆಂಟರ್-ಸೌತ್ ಸಂಸ್ಥೆಯ ಸಹ ಯೋಗದೊಂದಿಗೆ ಆಯೋಜಿಸ ಲಾಗುತ್ತಿದೆ.
ಕಾರ್ಯಾಗಾರದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ವಿಜ್ಞಾನ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸ ಲಾಗಿದ್ದು, ಜಿಯೋ ಇನ್ಫಾರ್ಮೆಟಿಕ್ಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸಗಳನ್ನು ನುರಿತ ತಜ್ಞರಿಂದ ಏರ್ಪಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಜಿಯೋ ಇನ್ ಪಾರ್ಮೆಟಿಕ್ಸ್ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಆಧುನಿಕ ಸಂಶೋಧನೆಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗುವದು.
ಕಾರ್ಯಾಗಾರದಲ್ಲಿ ಸ್ನಾತ ಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಯುವ ಉಪನ್ಯಾಸಕರು ಭಾಗವಹಿಸಲು ತಾ. 20 ರೊಳಗೆ ನೋಂದಾಯಿಸ ಬಹುದಾಗಿದೆ.
ಅಕಾಡೆಮಿಯು ಆಯೋಜಿಸ ಲಾಗುತ್ತಿರುವ ಉದ್ದೇಶಿತ ಕಾರ್ಯಾಗಾರವನ್ನು ಸ್ನಾತಕೋತ್ತರ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ. ರಮೇಶ್ ತಿಳಿಸಿದ್ದಾರೆ.