ಮಡಿಕೇರಿ, ಆ. 15: ಕಣಿವೆಯ ತೂಗು ಸೇತುವೆಗೆ ಪ್ರವಾಹದಿಂದ ಹಾನಿಯಾಗಿದೆ. ಇದರಿಂದಾಗಿ ಮೈಸೂರು ಮತ್ತು ಕೊಡಗು ಜಿಲ್ಲೆಯ ಗಡಿ ಭಾಗದ ಗ್ರಾಮಗಳ ಸಂಪರ್ಕ ಕಡಿದು ಹೋಗಿದ್ದು, ತೂಗು ಸೇತುವೆಯನ್ನು ಸರಿಪಡಿ ಸುವ ಸಂಬಂಧ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲಿಸಿ ದರು. ನಂತರ ಮುಳ್ಳುಸೋಗೆ ಯ ನಿಸರ್ಗ ಲೇಔಟ್ ಮಳೆಯಿಂದ ಹಾನಿ ಯಾಗಿರುವದನ್ನು ವೀಕ್ಷಿಸಿ ಕುಶಾಲನಗರದ ವಾಸವಿ ಪರಿಹಾರ ಕೇಂದ್ರದಲ್ಲಿ ಮಳೆಯಿಂದ ಹಾನಿಯಾದ ಫಲಾನುಭವಿಗಳಿಗೆ ಚೆಕ್ ವಿತರಿಸಿದರು.