ಮಡಿಕೇರಿ, ಆ. 15: ಕೂಡಿಗೆ ನಿವಾಸಿ ಐ.ಬಿ. ನಂಜಪ್ಪ ಅಲಿಯಾಸ್ ರಾಜ (55) ಎಂಬವರು ತಾ. 9ರಿಂದ ಕಾಣೆಯಾಗಿದ್ದು, ಈ ವ್ಯಕ್ತಿ ಬಗ್ಗೆ ಸುಳಿವು ಲಭಿಸಿದವರು ಕುಶಾಲನಗರ ಗ್ರಾಮಾಂತರ ಠಾಣೆಗೆ 08276-278433ಗೆ ಸಂಪರ್ಕಿಸಲು ತಿಳಿಸಲಾಗಿದೆ. ನಂಜಪ್ಪ ಕಾಣೆಯಾಗಿರುವ ಕುರಿತು ಅವರ ಸಹೋದರ ಐ.ಬಿ. ನಾಣಯ್ಯ ದೂರು ಸಲ್ಲಿಸಿದ್ದಾರೆ.