ವೀರಾಜಪೇಟೆ, ಆ. 14: ಕಳೆದ 9 ದಿನಗಳಿಂದ ಸುರಿದ ಮಳೆಗೆ ತತ್ತರಿಸಿ ಹೋಗಿದ್ದ ವೀರಾಜಪೇಟೆ ವಿಭಾಗ ಸಹಜ ಪರಿಸ್ಥಿತಿಗೆ ಮರಳಿದ್ದು, ಸಂತೆ ದಿನವಾದ ಇಂದು ವೀರಾಜಪೇಟೆ ಸುತ್ತಮುತ್ತಲಿರುವ ಗ್ರಾಮಸ್ಥರು ಮಳೆ ಕಡಿಮೆಯಾದ ಹಿನ್ನೆಲೆ ವ್ಯಾಪಾರದಲ್ಲಿ ಪಾಲ್ಗೊಂಡಿದ್ದರು.
ವೀರಾಜಪೇಟೆ ಪಟ್ಟಣದಲ್ಲಿ ಅಂಗಡಿ ಮುಗ್ಗಟ್ಟುಗಳು, ಹೊಟೇಲ್‍ಗಳು ಎಂದಿನಂತೆ ತೆರೆದು ವ್ಯಾಪಾರ ವಹಿವಾಟನ್ನು ನಡೆಸಿದರು. ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‍ಗಳು ಎಂದಿನಂತೆ ಸಂಚಾರವನ್ನು ಪುನ:ರಾರಂಭಿಸಿವೆ.
ಇತ್ತೀಚೆಗೆ ಸುರಿದ ಭಾರೀ ಮಳೆಗೆ ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆಯಲ್ಲಿ ಮೂರು ಅಂಗಡಿ ಮಳಿಗೆ ಭಾಗಶ: ಕುಸಿದಿದ್ದು, ಇಂದು ಬೆಳಗಿನ ಜಾವ ಈ ಮೂರು ಅಂಗಡಿ ಮಳಿಗೆ ನೆಲಸಮಗೊಂಡಿದೆ. ಯಾವದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.