ಮಡಿಕೇರಿ, ಆ. 15: ನಿವೃತ್ತ ರಾಜ್ಯ ಸರ್ಕಾರಿ ನೌಕರರ ಪಿಂಚಣಿ ಕುಂದುಕೊರತೆಗಳ ಪರಿಹಾರಕ್ಕಾಗಿ ತಾ. 23 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದ ಮೊದಲ ಮಹಡಿಯ ಕೊಠಡಿ ಸಂಖ್ಯೆ 6 ರಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ.
ನಿವೃತ್ತ ರಾಜ್ಯ ಸರ್ಕಾರಿ ನೌಕರರು ಇದರ ಸದುಪಯೋಗವನ್ನು ಪಡೆಯುವಂತೆ ಕೋರಲಾಗಿದೆ. ಪಿಂಚಣೆ ಸಂಬಂಧ ದೂರುಗಳೇ ನಾದರೂ ಇದ್ದಲ್ಲಿ ಆ ದಿನಾಂಕದ ಮುಂಚಿತವಾಗಿ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ 6 ರಲ್ಲಿರುವ ಸಹಾಯಕ ನಿರ್ದೇಶಕರ ಕಚೇರಿ, ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ದಾಖಲಿಸುವಂತೆ ಮತ್ತು ತಾ. 23 ರಂದು ಅದಾಲತ್‍ನಲ್ಲಿ ಭಾಗವಹಿಸು ವಂತೆ ಪಿಂಚಣಿ, ಸಣ್ಣ ಉಳಿತಾಯ, ಮತ್ತು ಆಸ್ತ್ತಿ-ಋಣ ನಿರ್ವಹಣೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.