ಮಡಿಕೇರಿ, ಆ. 14: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಅಂದಗೋವೆ, ಕೊಡಗರಹಳ್ಳಿ, ಕಲ್ಲೂರು ಗ್ರಾಮಗಳನ್ನೊಳಗೊಂಡ ಗ್ರಾಮಸಭೆ ತಾ. 20 ರಂದು ಬೆಳಿಗ್ಗೆ 11 ಗಂಟೆಗೆ ಕಲ್ಲೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಹೆಚ್.ಇ. ಅಬ್ಬಾಸ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
2019-20ನೇ ಸಾಲಿನ ವಾರ್ಡ್ ಸಭೆ ತಾ. 17 ರಂದು ಬೆಳಿಗ್ಗೆ 10.30 ಗಂಟೆಗೆ ವಾರ್ಡ್-4, ಕೊಡಗರಹಳ್ಳಿ, ಕಾವೇರಿ ಬಡಾವಣೆ, ಕೊಡಗರಹಳ್ಳಿ ಸರ್ಕಲ್ ವಾರ್ಡ್ಗಳಿಗೆ ಕೊಡಗರಹಳ್ಳಿ ಪಂಚಾಯಿತಿ ಕಚೇರಿಯಲ್ಲಿ ಮತ್ತು ಬೆಳಿಗ್ಗೆ 11.30 ಗಂಟೆಗೆ ಸ್ಕೂಲ್ ಬಾಣೆ ಮತ್ತು ಉಪ್ಪುತೋಡು ವಾರ್ಡ್ಗಳಿಗೆ ಕೊಡಗರಹಳ್ಳಿ ಪಂಚಾಯಿತಿ ಕಚೇರಿಯಲ್ಲಿ ವಾರ್ಡ್ ಸಭೆ ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ಅಂದಗೋವೆ ಮತ್ತು ಕಲ್ಲುಕೋರೆ ವಾರ್ಡ್ಗಳಿಗೆ ಮತ್ತು ಮಧ್ಯಾಹ್ನ 3 ಗಂಟೆಗೆ ಕಲ್ಲೂರು, ಅಂದಗೋವೆ ಪೈಸಾರಿ ವಾರ್ಡ್ಗಳಿಗೆ ಕಲ್ಲೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಡ್ ಸಭೆ ನಡೆಯಲಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.