ಮಡಿಕೇರಿ, ಆ. 13: 72ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಮಡಿಕೇರಿಯ ಇಲ್ಲಿನ ಐತಿಹಾಸಿಕ ಕೋಟೆ ಆವರಣ ಸಜ್ಜುಗೊಳ್ಳುತ್ತಿದೆ. ಪ್ರಸಕ್ತ ಮಳೆಯಿಂದಾಗಿ ಜಲಾವೃತಗೊಂಡಿದ್ದ ಕೋಟೆ ಪರಿಸರವನ್ನು ನಗರಸಭೆ ಸಿಬ್ಬಂದಿ ಶುಚಿಗೊಳಿಸತೊಡಗಿದ್ದಾರೆ.ಅಲ್ಲದೆ ನೀರನ್ನು ಚರಂಡಿ ಮುಖಾಂತರ ಹೊರಗೆ ಹೋಗುವ ನಿಟ್ಟಿನಲ್ಲಿ ಸ್ವಚ್ಛಗೊಳಿಸಿ, ಕಾರ್ಯಕ್ರಮ ಸ್ಥಳದಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿದ್ದಾರೆ. ಇದರೊಂದಿಗೆ ಪೊಲೀಸ್, ಎನ್ಸಿಸಿ, ಸೇವಾದಳ, ಗೃಹ ರಕ್ಷಕರು ಹಾಗೂ ಜಿಲ್ಲಾ ಪೊಲೀಸ್ ಶಸಸ್ತ್ರದಳ ಪಥ ಸಂಚಲನದೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಕ್ಕೂ ವೇದಿಕೆ ಸನ್ನದ್ಧಗೊಳ್ಳತೊಡಗಿದೆ.