ಕುಶಾಲನಗರ, ಆ. 13: ಕಾವೇರಿ ನದಿ ತಟದ ಎರಡು ಬದಿಗಳ ಒತ್ತುವರಿ ತೆರವು ಕಾರ್ಯಕ್ಕೆ ಕೇಂದ್ರ ಸರಕಾರ ಸದÀ್ಯದಲ್ಲಿಯೇ ಕಾರ್ಯ ಯೋಜನೆ ರೂಪಿಸಲಿದೆ ಎಂದು ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.ಅವರು ಕೊಪ್ಪ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನದಿ ತಟದಲ್ಲಿರುವ ಮನೆಗಳನ್ನು ತೆರವುಗೊಳಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗು ವದು. ಯಾವದೇ ಸಂದರ್ಭ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸದಂತೆ ಸ್ಥಳೀಯ ಆಡಳಿತ ಎಚ್ಚರವಹಿಸಬೇಕು ಎಂದರು.ನೆರೆ ಸಂತ್ರಸ್ತರಿಗೆ ಹೆಚ್ಚಿನ ಮೊತ್ತದ ಪರಿಹಾರ ಧನ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದು ಸೋಮವಾರ ನಡೆದ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಮನೆಗೆ ನೀರು ನುಗ್ಗಿದ ಸಂತ್ರಸ್ತರಿಗೆ 10 ಸಾವಿರ,

(ಮೊದಲ ಪುಟದಿಂದ) ಮನೆ ಪೂರ್ಣ ಕುಸಿತಗೊಂಡ ಫಲಾನುಭವಿಗಳಿಗೆ ರು 5 ಲಕ್ಷ ನೀಡಲಾಗುವದು. ಅಲ್ಲದೆ ಮುಳುಗಡೆ ಪ್ರದೇಶದಿಂದ ಜನರನ್ನು ಸ್ಥಳಾಂತರಿಸಿ ಅವರಿಗೆ 30x50 ವಿಸ್ತೀರ್ಣದ ನಿವೇಶನ ನೀಡುವದ ರೊಂದಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವದು ಎಂದು ತಿಳಿಸಿದರು.

ರಾಜ್ಯ ಸರಕಾರ ಈ ನಿಟ್ಟಿನಲ್ಲಿ ನೆರೆ ಸಂತ್ರಸ್ತರ ಸಂಕಷ್ಟಗಳಿಗೆ ಕೈಜೋಡಿಸಲಿದೆ. ಯಾವದೇ ಸಂದರ್ಭ ಅಧಿಕಾರಿಗಳು ಜನರ ದೂರಿನ ಬಗ್ಗೆ ನಿರ್ಲಕ್ಷ್ಯ ತಾಳದೆ ಸಮರ್ಪಕವಾಗಿ ಕೆಲಸ ನಿರ್ವಹಿಸ ಬೇಕೆಂದು ಸೂಚನೆ ನೀಡಿದರು.

ಈ ಸಂದರ್ಭ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್, ಅಧಿಕಾರಿಗಳು ಪ್ರತಿ ಮನೆಮನೆಗೆ ಭೇಟಿ ನೀಡಿ ಸರಕಾರದಿಂದ ಕಲ್ಪಿಸಲಾಗುವ ಎಲ್ಲಾ ಪರಿಹಾರವನ್ನು ತಲಪಿಸುವಲ್ಲಿ ಜವಾಬ್ದಾರಿ ತೋರಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೊಪ್ಪ ಗ್ರಾಮದ ಸುಮಾರು 150 ಜನ ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರವಾಗಿ ರೂ. 3800 ಚೆಕ್ ವಿತರಿಸಲಾಯಿತು.

ಉಳಿದ 6200 ರೂಗಳನ್ನು ಇನ್ನೆರೆಡು ದಿನಗಳಲ್ಲಿ ವಿತರಣೆಗೆ ಕ್ರಮಕೈಗೊಳ್ಳಲಾಗುವದು ಎಂದರು.

ಮನೆ ಕಳೆದುಕೊಂಡ ಸಂತ್ರಸ್ತರಿಗೆ ರೂ. 5 ಲಕ್ಷ ಘೋಷಣೆಯಾಗಿದ್ದು ತಾತ್ಕಾಲಿಕವಾಗಿ ರೂ. 95 ಸಾವಿರ ನೀಡಿದರು. ಉಳಿದಂತೆ ಅಲ್ಪ ಪ್ರಮಾಣದಲ್ಲಿ ಹಾನಿಗೊಂಡವರಿಗೆ ಚೆಕ್ ವಿತರಣೆ ನಡೆಯಿತು.

ಈ ಸಂದರ್ಭ ಪಿರಿಯಾಪಟ್ಟಣ ತಹಶೀಲ್ದಾರ್ ಶ್ವೇತ, ಜಿ.ಪಂ. ಸದಸ್ಯ ರಾಜೇಂದ್ರ, ತಾ.ಪಂ. ಸದಸ್ಯ ಐಲಾಪುರ ರಾಮು, ಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಸಹಿನಾ ಬಾನು ಮತ್ತಿತರ ಅಧಿಕಾರಿಗಳು ಇದ್ದರು.