ವೀರಾಜಪೇಟೆ, ಆ. 13: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದಲ್ಲಿರುವ ಸಂತ್ರಸ್ತರ ಶಿಬಿರಗಳಿಗೆ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಬಳಿಕ ವೀರಾಜಪೇಟೆಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರ ಖಂಡ್ರೆ ಕೊಡಗಿನಲ್ಲಿ ಪರಿಹಾರ ವಿತರಣೆ, ಪುನರ್ವಸತಿ, ಪುನರ್ ನಿರ್ಮಾಣದ ಕೆಲಸಗಳನ್ನು ಮಾಡಬೇಕಾಗಿರುವದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ನೋಂದ ಜನತೆ ಬದುಕು ಕಟ್ಟಿಕೊಳ್ಳುವ ತನಕ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.
ನಂತರ ಕಾರ್ಯಕರ್ತರೊಂದಿಗೆ ವೀರಾಜಪೇಟೆ ಪಟ್ಟಣದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸದಸ್ಯ ಅರುಣ್ ಮಾಚಯ್ಯ, ಪಕ್ಷದ ಮೈಸೂರು ಜಿಲ್ಲಾ ಅಧ್ಯಕ್ಷ ಡಾ. ಡಿ.ಜೆ. ವಿಯಯಕುಮಾರ್, ಕೊಡಗು ಜಿಲ್ಲಾ ವಕ್ತಾರ ಟಿ.ಇ. ಸುರೇಶ್, ಹಿರಿಯ ವಕೀಲ ಚಂದ್ರಮೌಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಉಪಾಧ್ಯಕ್ಷ ಪಿ.ಎ. ಹನೀಫ್, ನಗರ ಅಧ್ಯಕ್ಷ ಜಿ.ಜಿ. ಮೋಹನ್, ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಪಟ್ಟಣ ಪಂಚಾಯಿತಿ ಚುನಾಯಿತ ಸದಸ್ಯರು ಗಳಾದ ಪಟ್ಟಡ ರಂಜಿ ಪೂಣಚ್ಚ, ಡಿ.ಪಿ. ರಾಜೇಶ್, ಸಿ.ಕೆ. ಪೃಥ್ವಿನಾಥ್, ಮೊಹಮ್ಮದ್ ರಾಫಿ, ಅಗಸ್ಟಿನ್ ಬೆನ್ನಿ, ಮಾಜಿ ಸದಸ್ಯೆ ಶೀಬಾ ಪೃಥ್ವಿನಾಥ್, ಮಹಿಳಾ ಘಟಕದ ಗಾಯಿತ್ರಿ ನರಸಿಂಹನ್, ಪೊನ್ನಕ್ಕಿ, ಅಲ್ಪ ಸಂಖ್ಯಾತರ ಉಪಾಧ್ಯಕ್ಷ ರಫೀಕ್, ಮುಂತಾದವರು ಉಪಸ್ಥಿತರಿದ್ದರು.