ಎಂ.ಎಲ್.ಸಿ. ಸುನಿಲ್ ಸುಬ್ರಮಣಿ
ಮಡಿಕೇರಿ, ಆ. 13: ಸುಷ್ಮಾ ಸ್ವರಾಜ್ ಇಡೀ ವಿಶ್ವವೇ ಮೆಚ್ಚುವ ರೀತಿಯಲ್ಲಿ ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸಿದ ನಾಯಕಿಯಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಹೇಳಿದರು.
ಮಡಿಕೇರಿ ನಗರ ಬಿಜೆಪಿ ವತಿಯಿಂದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿತ ದಿ. ಸುಷ್ಮಾ ಸ್ವರಾಜ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸುಷ್ಮಾ ಸ್ವರಾಜ್ ಭಾವಚಿತ್ರಕ್ಕೆ ಪುಪ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ ಮಾತನಾಡಿ, 3 ಬಾರಿ ಶಾಸಕಿಯಾಗಿ, 7 ಬಾರಿ ಸಂಸದೆಯಾಗಿ ಭಾರತದ ರಾಜಕೀಯದಲ್ಲಿ ಪ್ರಜ್ವಲಿಸಿದ ಸುಷ್ಮಾ ಸ್ವರಾಜ್ ಸ್ತ್ರೀಶಕ್ತಿಯನ್ನು ರಾಜಕೀಯ ರಂಗದಲ್ಲಿಯೂ ನಿರೂಪಿಸಿದ ದಿಟ್ಟ ಮಹಿಳೆಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಡಿಕೇರಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಅರುಣ್‍ಕುಮಾರ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಮನು ಮಂಜುನಾಥ್, ಸಿ.ಕೆ. ಬಾಲಕೃಷ್ಣ, ಬಿಜೆಪಿ ಪ್ರಮುಖರಾದ ಟಿ.ಎಸ್. ಪ್ರಕಾಶ್, ಪಿ.ಡಿ. ಪೆÇನ್ನಪ್ಪ, ಬಿ.ಎಂ. ರಾಜೇಶ್, ಉಮೇಶ್ ಸುಬ್ರಮಣಿ, ರಾಕೇಶ್, ಸವಿತಾ ರಾಕೇಶ್, ಲಕ್ಷ್ಮೀ, ಭಾರತಿರಮೇಶ್, ಕನ್ನಿಕೆ, ಅಪ್ಪಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಸೋಮವಾರಪೇಟೆ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಸೋಮವಾರಪೇಟೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಸಂತಾಪ ಸಭೆ ನಡೆಯಿತು.
ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಅಭಿಮನ್ಯುಕುಮಾರ್ ಮಾತನಾಡಿ, ಸುಷ್ಮಾ ಸ್ವರಾಜ್ ಅವರ ನಿಧನದಿಂದಾಗಿ ಪಕ್ಷಕ್ಕೆ ಮಾತ್ರವಲ್ಲ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಈ ಸಂದರ್ಭ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ನಗರಾಧ್ಯಕ್ಷ ಸೋಮೇಶ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ತಾಲೂಕು ಕಾರ್ಯದರ್ಶಿ ಶರತ್‍ಚಂದ್ರ, ಉಪಾಧ್ಯಕ್ಷ ಪಿ. ಮಧು, ಪ.ಪಂ. ಸದಸ್ಯರಾದ ಪಿ.ಕೆ. ಚಂದ್ರು, ನಳಿನಿ ಗಣೇಶ್, ಪಕ್ಷದ ಮುಖಂಡರಾದ ಕೊಮಾರಿ ಸತೀಶ್, ದಾಕ್ಷಾಯಿಣಿ, ಉಷಾ ತೇಜಸ್ವಿ, ಹರಗ ಉದಯ, ರಾಮಕೃಷ್ಣ, ಮಲ್ಲೇಶ್, ಜಗನ್ನಾಥ್, ಅಶೋಕ್, ನೇಗಳ್ಳೆ ಜೀವನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಕೂಡಿಗೆ: ಕೂಡಮಂಗಳೂರು ಸಮುದಾಯ ಭವನದಲ್ಲಿ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಜಿ.ಪಂ. ಸದಸ್ಯೆ ಮಂಜುಳಾ, ತಾ.ಪಂ. ಸದಸ್ಯ ಗಣೇಶ, ತಾಲೂಕು ಭಾ.ಜ.ಪಾ. ಉಪಾಧ್ಯಕ್ಷ ಬೋಗಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಕೆ. ವರದ, ಎಸ್ಸಿ ಮೋರ್ಚಾದ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಎಸ್‍ಟಿ ಮೋರ್ಚಾ ಅಧ್ಯಕ್ಷ ಪ್ರಭಾಕರ, ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ ಮತ್ತಿತರರು ಇದ್ದರು.