ಶನಿವಾರಸಂತೆ, ಆ. 13: ಕೊಡ್ಲಿಪೇಟೆಯ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ತಂಡ ಚಿಕ್ಕಬಳ್ಳಾಪುರದಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಪಡೆದಿದೆ.
ತಂಡದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ‘ರಾಷ್ಟ್ರೀಯ ನಾಟ್ಯ ಕಲಾ ತಿಲಕ’ ಪ್ರಶಸ್ತಿ ದೊರೆಕಿದೆ. ತಂಡದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಧನುಷ್ರಾಜ್, ದೇವಿಪ್ರಸಾದ್, ಹೇಮಂತ್, ದಿಗಂತ್, ಹಿತಶ್ರೀ, ಇಬ್ಬನಿ, ಕೀರ್ತನ, ಶ್ರೀನಿಧಿ ಭಾಗವಹಿಸಿದ್ದರು. ಈ ತಂಡದ ನೃತ್ಯ ಸಂಯೋಜಕ ಅರ್ಪಿತ್ ಡಿಸೋಜ ಅವರಿಗೆ ‘ಉತ್ತಮ ನೃತ್ಯ ಸಂಯೋಜಕ’ ಪ್ರಶಸ್ತಿ ದೊರೆತಿದೆ.