ಮಡಿಕೇರಿ, ಆ. 13: ಕರ್ನಾಟಕ ಟೆಕ್ವಾಂಡೋ ಅಸೋಸಿಯೇಷನ್ ಹಾಗೂ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ವತಿಯಿಂದ ನಡೆಯುತ್ತಿರುವ 37ನೇ ರಾಜ್ಯಮಟ್ಟದ ಸಬ್ ಜೂನಿಯರ್ ಟೆಕ್ವಾಂಡೋ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಮರ್ಕರ ಟೆಕ್ವಾಂಡೋ ಕ್ಲಬ್‍ನ ವಿದ್ಯಾರ್ಥಿಗಳು ಪ್ರತಿನಿಧಿಸಿದ್ದಾರೆ.

ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಸಬ್ ಜೂನಿಯರ್ ವಿಭಾಗದಲ್ಲಿ ಕೊಡಗಿನಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಮಡಿಕೇರಿ ತಾಲೂಕಿನ ವಿದ್ಯಾರ್ಥಿಗಳಾದ ಎಂ.ಆರ್. ಮೃದುಲ್, ಮಿಶಾಲ್, ಯು.ಡಿ. ಮೋನಿಷ್, ಮಿಫ್‍ಜಲ್, ನಿಖಿಲ್, ಶಜೂಪ್ ಜೋಸೆಫ್, ಸೋಮವಾರಪೇಟೆ ತಾಲೂಕಿನ ಚಾರ್ಮಿ ಸುಬ್ಬಯ್ಯ ಭಾಗವಹಿಸಲಿದ್ದಾರೆ. ಇವರು ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್‍ನ ಮಾಸ್ಟರ್ ಕುಶಾಲ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.