ಕಾಜೂರುವಿನಲ್ಲಿ ಪರದಾಟ

ಸುಂಟಿಕೊಪ್ಪ, ಆ. 13: ಐಗೂರು ಗ್ರಾಮ ಪಂಚಾಯಿತಿಯ ಐಗೂರು, ಕಾಜೂರು, ಕಿಬ್ರಿ ಪೈಸಾರಿ ವಿಭಾಗದಲ್ಲಿ ಜಲ ಪ್ರಳಯವಾದರೂ ಕುಡಿಯುವ ನೀರು ಮಾತ್ರ ಲಭ್ಯವಾಗುತ್ತಿಲ್ಲ.

ಕಳೆದ 15 ಗ್ರಾಮ ಪಂಚಾಯಿತಿಯಿಂದ ಮನೆಗಳಿಗೆ ಸರಬರಾಜು ಆಗುತ್ತಿರುವ ಕುಡಿಯುವ ನೀರಿನ ವ್ಯವಸ್ಥೆ ಕೈಕೊಟ್ಟಿದೆ. 8 ದಿನಗಳಿಂದ ಈ ವಿಭಾಗದಲ್ಲಿ ವಿದ್ಯುತ್ ಬೆಳಕು ಕಂಡಿಲ್ಲ. ಇದರಿಂದ ನೀರಿನ ಸಮಸ್ಯೆ ಆಗುತ್ತಿದೆ ಎಂದು ಪಂಚಾತಿಯವರು ಸಬೂಬು ಹೇಳುತ್ತಿದ್ದರೂ, ಆಗೊಮ್ಮೆ ಈಗೊಮ್ಮೆ ವಿದ್ಯುತ್ ಬರುವಾಗಲಾದರೂ ಕುಡಿಯುವ ನೀರು ಬಿಡಬಹುದಲ್ಲವೇ ಎಂದು ಪ್ರಶ್ನಿಸಿದರೆ ಅದಕ್ಕೆ ಸದಸ್ಯರಲ್ಲಿ, ಪಿಡಿಓ ಅವರಲ್ಲಿ ಉತ್ತರವಿಲ್ಲ.

ಪಂಚಾಯಿತಿ ಆಡಳಿತದ ನಿರ್ಲಕ್ಷ್ಯದಿಂದ ಮಳೆಗಾಲದಲ್ಲಿ ಕುಡಿಯುವ ನೀರಿಗಾಗಿ ಜನರು ಪರಿತಪಿಸುವಂತಾಗಿದೆ.