ಶನಿವಾರಸಂತೆ, ಆ. 13: ಶನಿವಾರಸಂತೆ ಪೊಲೀಸ್ ಠಾಣೆಯ ಸಮೀಪ ಪೊಲೀಸ್ ಸಿಬ್ಬಂದಿಗಳ ವಸತಿ ಗೃಹದ ಬಳಿ ತಡೆಗೋಡೆ ನಿರ್ಮಾಣ ಕಾರ್ಯ ಅಪೂರ್ಣಗೊಂಡಿದ್ದು, ಮಳೆಯ ನೀರು ಶೇಖರಣೆಗೊಂಡು ಅಡಿಪಾಯದ ಮಣ್ಣು ಕುಸಿಯುವ ಸಂಭವವಿರುವದರಿಂದ, ಕೆಳ ಭಾಗದ ಹಳೆಯ ಪೊಲೀಸ್ ವಸತಿ ಗೃಹದಲ್ಲಿ ವಾಸವಿರುವ ಪೊಲೀಸರು ಭಯ ಭೀತರಾಗಿದ್ದಾರೆ. ಈಗೆ 15 ದಿನಗಳ ಹಿಂದೆ ಪೊಲೀಸ್ ಇಲಾಖೆಯ ಗುತ್ತಿಗೆದಾರರು ನೂತನ ಪೊಲೀಸ್ ವಸತಿಗೃಹದ ಬಳಿ ತಡೆಗೋಡೆ ನಿರ್ಮಾಣ ಕಾರ್ಯ ಕೈಗೊಂಡು ಕೆಲಸ ಅಪೂರ್ಣಗೊಂಡಿದೆ. ತಡೆಗೋಡೆಯ ಬಳಿ ಮಳೆಯ ನೀರು ಶೇಖರಣೆಗೊಂಡು ವಸತಿ ಗೃಹದ ಹಿಂಭಾಗದ ಅಡಿಪಾಯದ ಮಣ್ಣು ಕುಸಿದು ಅಪಾಯ ಉಂಟಾಗುವ ಸಂಭವವಿರುವದರಿಂದ ಪೊಲೀಸರ ಕುಟುಂಬ ಭಯ ಭೀತರಾಗಿದ್ದಾರೆ.