ಸುಂಟಿಕೊಪ್ಪ, ಆ. 13: ಕೊಡಗಿನಲ್ಲಿ ವಿಪರೀತ ಮಳೆಯಿಂದ ರೈತಾಪಿವರ್ಗದವರ ಬದುಕು ಮೂರಾಬಟ್ಟೆಯಾದರೆ ಕೃಷಿ ಫಸಲು ಕೈಕೊಟ್ಟಿದೆ. ಮತ್ತೊಂದೆಡೆ ಕಾಡಾನೆ ಹಾವಳಿಯಿಂದ ಬೆಳೆಗಾರರು ಹೈರಾಣಾಗಿದ್ದಾರೆ.
ಗದ್ದೆಹಳ್ಳದ ಯಂಕನ ಎಂ.ಆನಂದ ಅವರ ತೋಟಕ್ಕೆ ರಾತ್ರಿ ವೇಳೆ ಕಾಡಾನೆಗಳ ಹಿಂಡು ದಾಳಿಯಿಟ್ಟು ಬಾಳೆ, ಅಡಿಕೆಗಳನ್ನು ತಿಂದು ನಾಶಪಡಿಸಿದ್ದಲ್ಲದೆ, ಕಾಫಿಗಿಡಗಳ ರೆಕ್ಕೆಗಳು ಧ್ವಂಸವಾಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಈ ವರ್ಷದ ಮಳೆಯಿಂದ ಕೊಡಗಿನ ರೈತರ, ಬೆಳೆಗಾರರ ಬದುಕು ಚಿಂತಾಜನಕವಾಗಿದೆ. ಸರಕಾರ ಏನೇನು ಪರಿಹಾರ ನೀಡಿದರೂ ಮನೆಕಳಕೊಂಡವರು, ತೋಟ, ಗದ್ದೆ ಪ್ರವಾಹಕ್ಕೆ ತುತ್ತಾದವರ ಬದುಕು ಮತ್ತೆ ಬರಲು ಕಷ್ಟ ಸಾಧ್ಯವಾಗಿದೆ. ಮುಂದೆ ಕೊಡಗಿನ ಜನತೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕುವದರಲ್ಲಿ ಸಂಶಯವಿಲ್ಲ.