ಮಡಿಕೇರಿ, ಆ. 12: ಅಖಿಲ ಅಮ್ಮ ಕೊಡವ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ಅಮ್ಮ ಕೊಡವ ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಏಳನೇ ತರಗತಿ ಮೇಲ್ಪಟ್ಟ ಜನಾಂಗದ ವಿದ್ಯಾರ್ಥಿಗಳು ಅಂಕಪಟ್ಟಿ ಮತ್ತು ವ್ಯಾಸಂಗ ದೃಢೀಕರಣ ಪತ್ರ ಅಥವಾ ಶುಲ್ಕ ಪಾವತಿಸಿದ ನಕಲು ಪ್ರತಿಯೊಂದಿಗೆ ತಾ. 15 ರೊಳಗಾಗಿ ಆಯಾ ಗ್ರಾಮದ ಸಂಘದ ಪ್ರತಿನಿಧಿಗೆ ಅಥವಾ ಈ ಕೆಳಗಿನ ವಿಳಾಸದವರಿಗೆ ಸಲ್ಲಿಸುವಂತೆ ಸಂಘದ ಗೌರವ ಕಾರ್ಯದರ್ಶಿ ಉಮೇಶ್ ಕೇಚಮ್ಮಯ್ಯ ತಿಳಿಸಿದ್ದಾರೆ.
ವಿಳಾಸ: ಎನ್.ಕೆ. ಉಮೇಶ್ ಕೇಚಮ್ಮಯ್ಯ, ಗೌರವ ಕಾರ್ಯದರ್ಶಿ, ಅಖಿಲ ಅಮ್ಮ ಕೊಡವ ವಿದ್ಯಾಭಿವೃದ್ಧಿ ಸಂಘ, ಕುಟ್ಟಂದಿ ಗ್ರಾಮ ಮತ್ತು ಅಂಚೆ - 9480425773 ಮತ್ತು ಪಿ.ಜಿ. ಪ್ರಸಾದ್, ಛಾಪಾ ಕಾಗದ ಬರಹಗಾರರು ಪೊನ್ನಂಪೇಟೆ.