ಶನಿವಾರಸಂತೆ, ಆ. 13: ದುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ ಮಾದ್ರೆಗ್ರಾಮದ ಕೂಲಿಕಾರ್ಮಿಕ ದೊಡ್ಡಯ್ಯ (31) ತಾ. 10ರಂದು ಮನೆಯಿಂದ ಕಾಣೆಯಾಗಿದ್ದಾರೆ. ಮಾದ್ರೆ ಗ್ರಾಮದ ನಿವಾಸಿ ದೊಡ್ಡಯ್ಯ ಪ್ರತಿದಿನ ಕೂಲಿಕೆಲಸಕ್ಕೆ ಹೋಗುತ್ತಿದ್ದು, 10ರಂದು ಮಳೆ ಹೆಚ್ಚಾಗಿದ್ದುದರಿಂದ ಕೂಲಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದು, ಸಂಜೆ ಇದ್ದಕ್ಕಿದ್ದಂತೆ ಮನೆಯಿಂದ ಹೊರಗೆ ಹೋದವನು ವಾಪಾಸು ಮನೆಗೆ ಬಂದಿರುವದಿಲ್ಲ. ಈತನನ್ನು ಹುಡುಕಾಡಿದ ಅಕ್ಕ ಜಾನಕಿ ತಾ. 12ರಂದು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ, ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಪ್ರಕರಣ ದಾಖಲಿಸಿರುತ್ತಾರೆ.