ಸುಂಟಿಕೊಪ್ಪ, ಆ. 13: ಸುಂಟಿಕೊಪ್ಪ ಹೋಬಳಿಯ ನಾಕೂರು ಶಿರಂಗಾಲ ಗ್ರಾಮದ ಎಮ್ಮೆಗುಂಡಿ ತೋಟದಲ್ಲಿ ಬೃಹತ್ ಗಾತ್ರದ ಬೇಂಗ ಮರವೊಂದು ಗಾಳಿ ಮಳೆಗೆ ರಾತ್ರಿ ರಸ್ತೆಗೆ ಅಡ್ಡಲಾಗಿ ಬಿದ್ದು ನಾಕೂರು, ಕಾನ್ಬೈಲು, ನೆಟ್ಲಿ ಬಿ. ಲೆಬ್ಬೆ ಎಮ್ಮೆ ಗುಂಡಿ ಈ ಭಾಗದಿಂದ ಬರುವ ಆಟೋ ಚಾಲಕರಿಗೆ ಬೈಕು ಸವಾರರಿಗೆ ಇತರ ವಾಹನ ವಾಹನಗಳಿಗೆ ಸುಮಾರು 3 ಗಂಟÉಗಳ ಕಾಲ ರಸ್ತೆ ತಡೆಯುಂಟಾಯಿತು. ನಂತರ ತೋಟ ಕಾರ್ಮಿಕರು, ಸಾರ್ವಜನಿಕರು ಮರವನ್ನು ಕತ್ತರಿಸಿ ತೆರವುಗೊಳಿಸಿದರು.