ಮಡಿಕೇರಿ, ಆ. 13: ಪ್ರವಾಹಕ್ಕೆ ಸಿಲುಕಿ ಮನೆಯೊಳಗಡೆ ಸಾವನ್ನಪ್ಪಿದ ಮರಗೋಡು ಕಟ್ಟೆಮಾಡುವಿನ ಪರಂಬು ಪೈಸಾರಿ ನಿವಾಸಿ ಕುಂಞಣ್ಣ ಅವರ ಕುಟುಂಬಕ್ಕೆ ಶಾಸಕ ಅಪ್ಪಚ್ಚು ರಂಜನ್ ಅವರು ರೂ. 5 ಲಕ್ಷ ಪರಿಹಾರ ಹಾಗೂ 3,800ರ ತುರ್ತು ವೆಚ್ಚದ ಪರಿಹಾರ ಮೊತ್ತದ ಚೆಕ್ ಅನ್ನು ವಿತರಿಸಿದರು.
ಮರಗೋಡು ಪರಿಹಾರ ಕೇಂದ್ರಕ್ಕೆ ಭೇಟಿ ಮಾಡಿ ಅಲ್ಲಿ ಚೆಕ್ ಅನ್ನು ಹಸ್ತಾಂತರಿಸಿದರು. ಈ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಎಪಿಎಂಸಿ ಅಧ್ಯಕ್ಷ ಕಾಂಗಿರ ಸತೀಶ್, ತಾ.ಪಂ. ಸದಸ್ಯ ಅಪ್ರು ರವೀಂದ್ರ, ಭಾರತೀ ಹೈಸ್ಕೂಲ್ ಸೊಸೈಟಿ ಅಧ್ಯಕ್ಷ ಕಟ್ಟೆಮನೆ ಸೋನಾಜಿತ್, ತಹಶೀಲ್ದಾರ್ ಮಹೇಶ್, ಶಿಕ್ಷಣಾಧಿಕಾರಿ ಗಾಯತ್ರಿ ಇನ್ನಿತರರಿದ್ದರು.
ಶಾಸಕ ಕೆ.ಜಿ. ಬೋಪಯ್ಯ ಅವರು ಮಡಿಕೇರಿಯ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತೆರಳಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.