ಶ್ರೀಮಂಗಲ, ಆ. 12: ದಕ್ಷಿಣ ಕೊಡಗನ್ನು ಬಹುತೇಕ ಮುಳುಗಡೆಗೊಳಿಸುತ್ತಿದ್ದ ಬರಪೆÇಳೆ ಅಣೆಕಟ್ಟು ಯೋಜನೆಯ ವಿರುದ್ಧ ಬರಪೆÇಳೆ ಅಣೆಕಟ್ಟು ಹೋರಾಟ ಸಮಿತಿಯನ್ನು ಸ್ಥಾಪಿಸಿ, ಅದರ ಅಧ್ಯಕ್ಷರಾಗಿ ಮಾರಕ ಬರಪೆÇಳೆ ಅಣೆಕಟ್ಟು ಯೋಜನೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದ ಬೇಗೂರು ಗ್ರಾಮದ ಚೋಡುಮಾಡ ಸಾಧು ಪೂಣಚ್ಚ ಅವರ ನಿಧನಕ್ಕೆ ಹುದಿಕೇರಿ ಪಟ್ಟಣವನ್ನು ಒಂದು ತಾಸುಗಳ ಕಾಲ ಸಾಂಕೇತಿಕವಾಗಿ ಬಂದ್ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.
ಈ ಸಂದರ್ಭ ಮಾತನಾಡಿದ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಅಜ್ಜಿಕುಟ್ಟೀರ ಪ್ರವೀಣ್, ಸಾಧು ಪೂಣಚ್ಚ ಅವರ ಸೇವೆಯನ್ನು ಸ್ಮರಿಸಿದರು. ಸಾಧು ಪೂಣಚ್ಚ ಅವರ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮ ಬೇಗೂರಿನಲ್ಲಿ ನಡೆಯಿತು.
ಈ ಸಂದರ್ಭ ಮುಖಂಡರಾದ ಕೊಡಂಗಡ ವಾಸು, ಮೀದೇರಿರ ಗಣೇಶ್, ಅಜ್ಜಿಕುಟ್ಟೀರ ಮಾದಪ್ಪ, ಎಂ.ಡಬ್ಲ್ಯೂ ಮುದ್ದಪ್ಪ, ಮಂಡಂಗಡ ಅಶೋಕ್, ಸಿ.ಕೆ. ಕಾಳಯ್ಯ ಮತ್ತಿತರರು ಹಾಜರಿದ್ದರು.