ಗೋಣಿಕೊಪ್ಪ ವರದಿ: ಪೊನ್ನಂಪೇಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತಿ ಹೊಂದಿದ ಎ.ಪಿ. ಸಾವಿತ್ರಿ ಅವರಿಗೆ ಶಾಲೆಯ ಶಿಕ್ಷಕ ವೃಂದದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಈ ಸಂದರ್ಭ ಮುಖ್ಯ ಶಿಕ್ಷಕ ಬಿ.ಎಂ. ವಿಜಯ್, ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಂಡ ಜೀವನ್, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಮಕೃಷ್ಣ ಇತರರು ಇದ್ದರು.ಕುಶಾಲನಗರ: ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ವತಿಯಿಂದ ನಿವೃತ್ತ ಉಪನ್ಯಾಸಕ ಪುಟ್ಟರಾಜು ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಮೂವತ್ತು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಇತಿಹಾಸ ಉಪನ್ಯಾಸಕ ಪುಟ್ಟರಾಜು ಅವರನ್ನು ಬೀಳ್ಕೊಡಲಾಯಿತು. ಉಪ ನಿರ್ದೇಶಕ ಜಿ. ಕೆಂಚಪ್ಪ, ಉಪನ್ಯಾಸಕರ ಸಂಘದ ಅಧ್ಯಕ್ಷ ಫಿಲಿಪ್ ವಾಸ್, ಗೌರವ ಅಧ್ಯಕ್ಷೆ ಅಶ್ವಿನಿ ಕುಮಾರ್, ಪ್ರಧಾನ ಕಾರ್ಯದರ್ಶಿ ಹಂಡ್ರಂಗಿ ನಾಗರಾಜ್, ತಾಲೂಕು ಘಟಕದ ಅಧ್ಯಕ್ಷ ನಾಗಪ್ಪ, ಕಾರ್ಯದರ್ಶಿ ರುದ್ರಪ್ಪ, ಸಂಸ್ಥೆಯ ಪ್ರಾಂಶುಪಾಲ ಪುರುಷೋತ್ತಮ್ ಮತ್ತಿತರರು ಇದ್ದರು.ನಾಪೋಕ್ಲು: ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ನಿರ್ವಹಿಸಿದ ಕೆ.ಸಿ. ಕಾವೇರಮ್ಮ ಅವರಿಗೆ ನಾಪೋಕ್ಲು ಇಂದಿರಾನಗರ ಅಂಗನವಾಡಿ ಕೇಂದ್ರದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮೇಲ್ವಿಚಾರಕಿ ಸವಿತಾ ಮಾತನಾಡಿ, ಕೇಂದ್ರದಲ್ಲಿ ಕಾರ್ಯಕರ್ತೆಯರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಶುಚಿತ್ವ, ಮಕ್ಕಳೊಂದಿಗೆ ಆಟಪಾಠಗಳಲ್ಲಿ ಕಾರ್ಯನಿರತವಾಗಿರಬೇಕು ಎಂದರು. ಯೋಜನಾಧಿಕಾರಿ ಶೀಲಾ ಮಾತನಾಡಿ, ಕೇಂದ್ರದ ವ್ಯಾಪ್ತಿಯಲ್ಲಿ ಸಮುದಾಯದಲ್ಲಿ ನಾವು ಗೌರವದಿಂದ ಇರಬೇಕು. ಕೇಂದ್ರದಲ್ಲಿ ಮಾಡುವ ಸಭೆಗಳಲ್ಲಿ ಕಚೇರಿಗಳಿಂದ ಸಿಗುವ ಸೌಲಭ್ಯ ಯೋಜನೆಗಳ ಮಾಹಿತಿ ತಿಳಿಸುವಂತೆ ಸಲಹೆ ಮಾಡಿದರು. ಜಾನಕಿ ಮಕ್ಕಳ ಚುಚ್ಚುಮದ್ದುಗಳು, ಗರ್ಭಿಣಿ, ಬಾಣಂತಿಯರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು. ವರ್ತುಲದ ನಾಯಕಿ ಆಶಾಲತಾ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ದುಡಿಮೆಯ ಹಿನ್ನೆಲೆ ದುಡಿಮೆಗೆ ತಕ್ಕ ವೇತನ ಸಿಗುತ್ತಿಲ್ಲವಾದರೂ ನಮಗೆ ವಹಿಸಿರುವ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದರು. 27 ವರ್ಷಗಳ ಕಾಲ ಸೇವೆ ನಿರ್ವಹಿಸಿದ ಕೆ.ಸಿ. ಕಾವೇರಮ್ಮ ಅವರಿಗೆ ಕಿರುಕಾಣಿಕೆ ನೀಡಿ ಇವರ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು. ಶಾರದಾ ಪ್ರಾರ್ಥಿಸಿ, ಅನುರಾವತಿ ಸ್ವಾಗತಿಸಿದರು. ಆಶಾಲತಾ ನಿರೂಪಿಸಿ, ಭುವನೇಶ್ವರಿ ವಂದಿಸಿದರು. ಕಾರ್ಯಕ್ರಮದಲ್ಲಿ ನಾಪೋಕ್ಲು ವರ್ತುಲದ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು.