ಸುಂಟಿಕೊಪ್ಪ, ಜು. 13: ಆಟೋ ಚಾಲಕರ ಸಂಘದ ಸದಸ್ಯ ಪ್ರವೀಣ್ ಪಿಂಟೋ ಅವರಿಗೆ ಶಸ್ತ್ರ ಚಿಕಿತ್ಸೆಗಾಗಿ ಧನ ಸಹಾಯ ನೀಡಲಾಯಿತು. ಸುಂಟಿಕೊಪ್ಪ ಆಟೋ ಚಾಲಕರ ಸಂಘದ ಅಧ್ಯಕ್ಷ ಬಿ.ಕೆ. ಪ್ರಶಾಂತ್, ಕಾರ್ಯದರ್ಶಿ ಜೇಮ್ಸ್ ಡಿಸೋಜ, ಮಂಜಿಕೆರೆ ನಿವಾಸಿ ಆಟೋ ಚಾಲಕ ಪ್ರವೀಣ್ ಪಿಂಟೋ ಅವರಿಗೆ ಶಸ್ತ್ರ ಚಿಕಿತ್ಸೆಗಾಗಿ ರೂ. 10 ಸಾವಿರದ ಚೆಕ್‍ನ್ನು ನೀಡಿದರು. ಈ ಸಂದರ್ಭ ಗೌರವಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಮಂಜೇಶ್, ಖಜಾಂಚಿ ಡಿ.ಎ. ಧನಂಜಯ ಸಂಘದ ಸದಸ್ಯರು ಇದ್ದರು.