*ಸಿದ್ದಾಪುರ, ಆ. 13: ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎಂಬಂತಾಗಿದೆ ಆಶ್ಲೇಷ ಮಳೆ ಹಾಕಿ ಹೋದ ಬರೆ. ಸಿದ್ದಾಪುರ, ನೆಲ್ಯಹುದಿಕೇರಿ, ವಾಲ್ನೂರು- ತ್ಯಾಗತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಗಳು ಪ್ರವಾಹದಲ್ಲಿ ಮುಳುಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಡಿಗೋಡು ಗ್ರಾಮದ ನದಿ ದಡದ ಪ್ರದೇಶಗಳ ಮನೆಗಳು ಸಂಪೂರ್ಣ ಜಲಾವೃತಗೊಂಡು ಇಲ್ಲಿನ ನಿವಾಸಿಗಳು ಬೀದಿಪಾಲಾಗಿದ್ದಾರೆ.

ಸಿದ್ದಾಪುರ ಗ್ರಾಮ ವ್ತಾಪ್ತಿಯಲ್ಲಿ 106 ಮನೆಗಳು ಜಲ ಸಮಾಧಿ ಯಾಗಿವೆÉ. ಮನೆಯೊಳಗಿದ್ದ ಸಂಪೂರ್ಣ ವಸ್ತುಗಳು ನೀರು ಪಾಲಾಗಿವೆ. ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ 350 ಮನೆಗಳು ಭಾಗಶಃ ಕುಸಿದಿದ್ದು 125 ಮನೆಗಳು ಪ್ರವಾಹದಲ್ಲಿ ಸಿಲುಕಿ ಅಸ್ತಿತ್ವ ಕಳೆದುಕೊಂಡಿವೆ. ವಾಲ್ನೂರು- ತ್ಯಾಗತ್ತೂರು ಗ್ರಾಮದಲ್ಲಿ ಆಶ್ಲೇಷ ಮಳೆಯ ರೌದ್ರ್ರ ನರ್ತನಕ್ಕೆ ಅಂದಾಜು 400 ಎಕರೆಗಿಂತ ಹೆಚ್ಚಿನ ಕಾಫಿ ತೋಟಗಳು, ಕೃಷಿ ಗದ್ದೆಗಳು ಪ್ರವಾಹ ದಲ್ಲಿ ಸಿಲುಕಿ ಇಲ್ಲಿನ ಬೆಳೆಗಾರರಿಗೆ, ರೈತಾಪಿ ವರ್ಗಕ್ಕೆ ಕೋಟ್ಯಾಂತರ ನಷ್ಟ ತಂದಿಟ್ಟಿದೆ.

ಜನಪ್ರತಿನಿಧಿಗಳು ಪರಿಹಾರ ಕೇಂದ್ರದಲ್ಲಿ

ಕರಡಿಗೋಡು ಗ್ರಾಮದ ನದಿ ತಟದಲ್ಲಿ ವಾಸವಿರುವ ಗ್ರಾಮ ಪಂಚಾಯತ್ ಸದಸ್ಯರಾದ ಪೂವಮ್ಮ, ಯಮುನಾ ಅವರ ಮನೆಗಳು, ಚಿಕ್ಕನಹಳ್ಳಿ ಪೈಸಾರಿ ನಿವಾಸಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಕರ್ಪಯ್ಯ ಎಂಬವರ ಮನೆಗಳು ನದಿ ನೀರಿನ ಏರುವಿಕೆಯಿಂದ ಕುಸಿದಿದ್ದು' ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಗುಹ್ಯ ವಾರ್ಡ್ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್, ಕಕ್ಕಟ್‍ಕಾಡು ಗ್ರಾ.ಪಂ. ಸದಸ್ಯ ರೆಜಿತ್ ಕುಮಾರ್ ಮನೆಗಳು ಕಾವೇರಿ ನದಿಯ ದಂಡೆಯಲ್ಲಿದ್ದು ಪ್ರವಾಹದಲ್ಲಿ ಮನೆ ಕಳೆದುಕೊಂಡು ಬಿಜಿಎಸ್ ಶಾಲೆಯಲ್ಲಿ ಸ್ಥಾಪಿಸಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ನೆಲ್ಯಹುದಿಕೇರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಫಿಯಾ ಎಂಬಾಕೆಯ ಮನೆ ಸಂಪೂರ್ಣ ಕುಸಿದಿದ್ದು ಸ್ಥಳೀಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ನೆಲ್ಯಹುದಿಕೇರಿ ಕಾವೇರಿ ಸೇತುವೆ ಬಳಿ ಕೃಷಿ ಗದ್ದೆಯಲ್ಲಿರುವ ಮನೆಗಳು, ಸೇತುವೆ ಬಳಿಯ ಕಾವೇರಿ ನದಿ ದಂಡೆಯುದ್ದಕ್ಕೂ ಇರುವ ಮನೆಗಳು ಕಾವೇರಿ ನದಿ ಏರುವಿಕೆಯಿಂದ ಕೆಲವು ಮನೆಗಳು ಬಿರುಕು ಬಿಟ್ಟಿದ್ದರೆ, ಹೆಚ್ಚಿನ ಮನೆಗಳು ಕುಸಿದಿವೆ.

ಈ ವ್ಯಾಪ್ತಿಯ ಬಹುತೇಕ ಜಾನುವಾರುಗಳು ನದಿ ಪಾಲಾಗಿವೆÉ. ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೋಳಿ, ಹಸುಗಳು ಆಡುಗಳು ಸೇರಿದಂತೆ ಕೆಲ ದ್ವಿಚಕ್ರ ಮತ್ತು ಕಾರುಗಳು, ಗ್ಯಾಸ್ ಸಿಲಿಂಡರ್‍ಗಳು, ಸ್ಟವ್‍ಗಳು, ಟಿ.ವಿ. ರೆಫ್ರಿಜರೇಟರ್‍ಗಳು ಕೊಚ್ಚಿ ಹೋಗು ತ್ತಿದ್ದ ದೃಶ್ಯಗಳನ್ನು ನೆನಪಿಸಿಕೊಂಡು ಜನತೆ ದುಖಃದಿಂದ ಹೊರಬರುತ್ತಿಲ್ಲ. ಕೆಲ ಜಾನುವಾರುಗಳನ್ನು ಸ್ಥಳಿಯರು ರಕ್ಷಿಸಿದ್ದರೂ ಇದೀಗ ಮೇವಿಗಾಗಿ ಪರದಾಡುತ್ತಿವೆÉ. ಕುಂಬಾರಗುಂಡಿ ಮತ್ತು ಸುತ್ತಲ ಪ್ರದೇಶಗಳ ಜಾನು ವಾರುಗಳನ್ನು ರಕ್ಷಿಸಿದ್ದು ಪಂಚಾಯತ್ ಮಾಜಿ ಸದಸ್ಯ ಮಂಡೇಪಂಡ ಅಯ್ಯಪ್ಪನವರು ಹಸುಗಳಿಗೆ ತಮ್ಮ ಕೊಟ್ಟಿಗೆಯಲ್ಲಿ ಆಶ್ರಯ ನೀಡಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳ ಸಮವಸ್ತ್ರ, ಶಾಲಾ ಪಠ್ಯ ಪುಸ್ತಕಗಳು, ಅಮೂಲ್ಯ ದಾಖಲಾತಿ ಗಳು ಕಣ್ಮರೆಯಾಗಿವೆÉ. ವಾಲ್ನೂರು ಹೊಳೆಕೆರೆಯ 4 ಮನೆಗಳು ಕುಸಿದಿವೆ. 9 ಮನೆಗಳು ಭಾಗಶಃ ಹಾನಿಗೊಂಡಿವೆ.