ಸೋಮವಾರಪೇಟೆ, ಜು. 11: ರೋಟರಿ ಸಂಸ್ಥೆಯ ವತಿಯಿಂದ ಮಾನಸ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಹತ್ತನೆ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಎಂ.ಯು. ಶ್ರಾವಣಿ, ಹೆಚ್.ಕೆ. ಚಿನ್ಮಯಿ, ಸರ್ಕಾರಿ ಪೌಢಶಾಲೆಯ ಹೆಚ್.ಎಂ. ನವ್ಯ, ಎ. ಸುಮಿತ್ರ, ಎಂ.ಎಂ. ಶಿವಕುಮಾರ್, ಪ್ರಶಾಂತ್ ಕುಮಾರ್, ಸರ್ಕಾರಿ ಪಿ.ಯು. ಕಾಲೇಜಿನ ಎಸ್.ಬಿ. ತೇಜಸ್ವಿನಿ, ಜರ್ಸಿ, ಆಯಷಾ ತಪ್ಸಿಯ ಅವರುಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಡಿ.ಪಿ. ರಮೇಶ್, ಜಿಲ್ಲಾ ಸಹಾಯಕ ರಾಜ್ಯಪಾಲ ಪಿ. ನಾಗೇಶ್, ಆರ್.ಎಫ್.ಒ. ಲಕ್ಷ್ಮೀಕಾಂತ್, ಕಾರ್ಯದರ್ಶಿ ಹೆಚ್.ಸಿ. ಲೋಕೇಶ್, ಪದಾಧಿಕಾರಿಗಳಾದ ಪ್ರಕಾಶ್, ಎಂ.ಡಿ. ಲಿಖಿತ್, ರಾಕೇಶ್ ಪಟೇಲ್ ಇದ್ದರು.