ಮಡಿಕೇರಿ, ಆ. 11: ನೆರೆಹಾವಳಿಯಿಂದ ಹಾನಿಗೀಡಾದ ಜಿಲ್ಲೆಗಳಲ್ಲಿ ವಿಶೇಷ ಕರ್ತವ್ಯಾಧಿಕಾರಿಗಳಾಗಿ ಕಾರ್ಯನಿರ್ವಹಿಸಲು ಹಲವು ಉನ್ನತಾಧಿಕಾರಿಗಳನ್ನು ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಕೊಡಗು ಜಿಲ್ಲೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರೊಂದಿಗೆ ವಿಶೇಷ ಅಧಿಕಾರಿಗಳಾಗಿ ರಾಯಚೂರಿನ ಐಎಎಸ್ ಪರೀಕ್ಷಾರ್ಥ ಅಧಿಕಾರಿ ಉಕೇಶ್‍ಕುಮಾರ್, ಬೆಂಗಳೂರಿನ ವಕ್ಫ್ ಮಂಡಳಿಯ ಹೆಚ್ಚುವರಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೊಹಮದ್ ನಯೀಮ್ ಮಾಮಿನ್, ಮೈಸೂರು ಮಿನರಲ್ಸ್‍ನ ಪ್ರಧಾನ ವ್ಯವಸ್ಥಾಪಕ ಗಂಗಪ್ಪ ಎಂ. ಹಾಗೂ ಶಿಶು ಆರೋಗ್ಯ ಸುಧಾರಣಾ ಇಲಾಖೆಯಲ್ಲಿ ಕೆಎಎಸ್ ಅಧಿಕಾರಿಯಾಗಿರುವ ರೂಪಶ್ರೀ ಕೆ. ಅವರನ್ನು ನಿಯೋಜಿಸಲಾಗಿದೆ. ಈ ತಂಡ ತಾ. 21 ರವರೆಗೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲಿದೆ.