ಕೂಡಿಗೆ, ಅ. 11: ಕೂಡ್ಲಿಪೇಟೆಯ ಮುರುಗ ಎಂಬವರ ಕುಟುಂಬದ ಇಬ್ಬರು ಮಕ್ಕಳಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕುಶಾಲನಗರ ಸಮೀಪದ ಕೊಪ್ಪದ ವೈದ್ಯಾಧಿಕಾರಿ ಬಳಿ ಚಿಕಿತ್ಸೆ ಪಡೆಯಲು ತಾ.11ರಂದು ರಾತ್ರಿ 8 ಗಂಟೆಯ ಸಮಯದಲ್ಲಿ ತಮ್ಮ ಕಾರಿನಲ್ಲಿ ಕುಶಾಲನಗರಕ್ಕೆ ಬರುತ್ತಿದ್ದಾಗ ಕೂಡಿಗೆ-ಕಣಿವೆಯ ಮಧ್ಯ ರಸ್ತೆಯಲ್ಲಿ ನೀರು ಇದ್ದರೂ ರಸ್ತೆಯನ್ನು ದಾಟಲು ಪ್ರಯತ್ನಿಸಿದ ಸಂದರ್ಭದಲ್ಲಿ ಮುರುಗ ಅವರ ಕಾರು ನೀರಿನಲ್ಲಿ ಸಿಲುಕಿಕೊಂಡಿತು.
ಕಾರಿನಲ್ಲಿದ್ದ ಪುರುಷರು ಮತ್ತು ಮಹಿಳೆಯರು ಸಹಾಯಕ್ಕೆ ಕೂಗಿದ ಸಂದರ್ಭ ಸಮೀಪದ ಮನೆಯವರು ಕೂಡಿಗೆ ಯುವಕರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ತಕ್ಷಣ ಬಂದ 10ಕ್ಕೂ ಹೆಚ್ಚು ಯುವಕರ ಪಡೆ ನದಿಯ ನೀರು ಹೆಚ್ಚುತ್ತಿದರೂ ಲೆಕ್ಕಿಸದೆ ಕಾರಿನಲ್ಲಿದ್ದ ಎರಡು ಕುಟುಂಬದವರನ್ನು ಕಾರಿನಿಂದ ಇಳಿಸಿ ದಡ ಸೇರಿಸಿದರು. ನಂತರ ಅರೋಗ್ಯ ಸರಿ ಇಲ್ಲದವರನ್ನು ಕುಶಾಲನಗರ ದವರೆಗೆ ಬೇರೆ ಕಾರಿನಲ್ಲಿ ಬಿಟ್ಟು ಚಿಕಿತ್ಸೆಗೆ ಸಹಾಯ ಮಾಡಿದರು. ಕಾರನ್ನು ನೀರಿನಿಂದ ಎಳೆದು ರಸ್ತೆಯ ಬದಿಯಲ್ಲಿ ನಿಲ್ಲಿಸಿದರು.