ಕೂಡಿಗೆ, ಆ. 11: ಕೂಡುಮಂಗಳೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ, ಅಲಿಖ ಭಾರತ ವೀರಶೈವ ಮಹಾ ಸಭಾ ಜಿಲ್ಲಾಧ್ಯಕ್ಷ ಶಿವಪ್ಪ ಅವರು ಮಾತನಾಡಿ, ಸಮಾಜದ ಕಾರ್ಯಕ್ರಮದ ಜೊತೆಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವದು ಬಹು ಮುಖ್ಯವಾಗುತ್ತದೆ ಎಂದರು.

ಕೊಡಗು ಜಿಲ್ಲೆ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್, ವೀರಶೈವ ಮಹಾ ಸಭಾ ಕಾರ್ಯದರ್ಶಿ ಶಂಭುಶಿವಪ್ಪ, ಉದಯಕುಮಾರ್, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹಾದೇವಪ್ಪ, ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ವಿಶ್ವೇಶ್ವರಯ್ಯ, ಕಾರ್ಯದರ್ಶಿ ಅವಿನಾಶ್ ಎಂ.ಎಲ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೆ.ವಿ. ಸಣ್ಣಪ್ಪ, ಸಮಾಜದ ಬಾಂಧವರಾದ ಕೆ.ಪಿ.ಪರಶಿವ, ಮಹೇಶ ಎಂ.ಎಸ್, ಲೋಹಿತಾಶ್ವ, ಸದಾಶಿವ, ಮಂಜುನಾಥ್, ಪ್ರಶಾಂತ್, ನವೀನ್, ನಟೇಶಕುಮಾರ್, ಕಾಂತರಾಜು ಎ. ಮತ್ತಿತರರು ಇದ್ದರು.