ಗೋಣಿಕೊಪ್ಪ ವರದಿ, ಆ. 11: ಪಟ್ಟಣದ 21 ನಿರಾಶ್ರಿತ ಕುಟುಂಬಗಳಿಗೆ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಆಹಾರ ಧಾನ್ಯ, ಕಂಬಳಿ ವಿತರಣೆ ಮಾಡಲಾಯಿತು.
ಕೀರೆಹೊಳೆ ಪ್ರವಾಹದಿಂದ ಮನೆ ಮುಳುಗಿದ್ದ ಕಾರಣ ಆಶ್ರಯ ಕಳೆದುಕೊಂಡಿದ್ದ ಇವರಿಗೆ ಸ್ಥಳೀಯರಾದ ಪತ್ರಕರ್ತ ವಿ. ವಿ. ಅರುಣ್‍ಕುಮಾರ್ ತಮ್ಮ ಮನೆಯಲ್ಲಿ ಆಶ್ರಯ ಕಲ್ಪಿಸಿದ್ದರು. ಇಲ್ಲಿಗೆ ಭೇಟಿ ನೀಡಿದ್ದ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಭೋದಸ್ವರೂಪನಂದಾ ಮಹರಾಜ್ ಕಿಟ್ ವಿತರಿಸಿದರು.