ಮಡಿಕೇರಿ, ಆ. 11: ಹುಣಸೂರಿನ ಪ್ರಶಾಂತ್ ಲಾಡ್ಜ್ನಲ್ಲಿ ಉಳಿದುಕೊಂಡಿದ್ದ ವೀರಾಜಪೇಟೆ ತಾಲೂಕಿನ ಬೇಟೋಳಿ ಸಂಶಾದ್ (25), ವಾಜಿದ್ (23) ಮತ್ತು ವೀರಾಜಪೇಟೆಯ ವಿದ್ಯಾನಗರದ ಅಬ್ದುಲ್ ರಶೀದ್ (26) ಇವರುಗಳು ತಾ. 6 ರಂದು ಲಾಡ್ಜ್ನ ಮ್ಯಾನೇಜರ್ ಹರೀಶ್ ಮುದ್ದಪ್ಪ ಅವರಿಗೆ 2000 ರೂ.ನ ಖೋಟಾನೋಟನ್ನು ನೀಡಿದಾಗ ಅನುಮಾನಗೊಂಡ ಹರೀಶ್ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಡಿವೈಎಸ್ಪಿ ಸುಂದರ್ ರಾಜ್, ಸಿಪಿಐ ಪೂವಯ್ಯ, ಪಿಎಸ್ಐ ಮಹೇಶ್ ಜೆ.ಇ. ಇವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ 2000 ರೂ.ನ ಒಟ್ಟು 11 ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.