ಗೋಣಿಕೊಪ್ಪಲು, ಆ. 10: ಈ ಬಾರಿ ಸುರಿದ ಭಾರಿ ಮಳೆಗೆ ಫಲವ ತ್ತಾದ ಕೃಷಿ ಭೂಮಿ, ಭತ್ತದ ಗದ್ದೆ, ಕೆರೆ, ಸಂಪೂರ್ಣ ನೀರು ಪಾಲಾಗಿದ್ದು ಭತ್ತ ಬೆಳೆಯಲು ತಯಾರು ಮಾಡಿದ್ದ ಪೈರು ನಾಶವಾಗಿದೆ.
ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನೂರು ಗ್ರಾಮದಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿ ಸುತ್ತಿರುವ ಕುಟುಂಬಗಳು ಸಾವಿರಾರು ಎಕರೆ ಭೂಮಿ ನೀರು ಪಾಲಾಗಿದೆ.
62 ವರ್ಷಗಳ ಹಿಂದೆ ಈ ರೀತಿಯ ನೆರೆ ಹಾವಳಿ ಇತ್ತು. ಇದೀಗ ನೋಡುತ್ತಿದ್ದೇವೆ ಎಂದು ಗ್ರಾಮದ ಹಿರಿಯರಾದ ಮಂದೇಮಾಡ ಬೋಸ್ ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ.
ಸ್ಥಳಕ್ಕೆ ಕೊಡಗು ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ತೆರಳಿ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದರು.
ಭೇಟಿಯ ಸಂದರ್ಭದಲ್ಲಿ ಆರ್.ಎಂ.ಸಿ. ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ, ಬಾಳೆಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಸುಕೇಶ್, ಅಡ್ಡೆಂಗಡ ಅರುಣ್, ಅಜೇಯ್, ಬಿಜೆಪಿ ಜಿಲ್ಲಾ ಮುಖಂಡರಾದ ಪಿ.ಡಿ. ಪೊನ್ನಪ್ಪ, ಜ್ಯೋತಿ ಮುಂತಾದವರು ಹಾಜರಿದ್ದರು.
-ಚಿತ್ರ, ವರದಿ ಹೆಚ್.ಕೆ. ಜಗದೀಶ್.