ಬಲ್ಲಮಾವಟಿ, ಆ. 10: ಬಲ್ಲಮಾವಟಿ ಗ್ರಾ.ಪಂ. ಪೇರೂರು ಗ್ರಾಮದ ಮಂಜೆಟ್ ಕಾಲೋನಿಯ 8 ಮನೆಗಳು ಕುಸಿದಿದ್ದು, ಇಲ್ಲಿಯ ಸುಮಾರು 30 ಜನರಿಗೆ ಆಶ್ರಯ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಬಲ್ಲಮಾವಟಿಯಲ್ಲಿ ಪರಿಹಾರ ಕೇಂದ್ರ ಮಾಡಿಕೊಡಬೇಕೆಂದು ಗ್ರಾಮಸ್ಥರ ಪರವಾಗಿ ಕೆ.ಆರ್. ಸುಗುಣ ಒತ್ತಾಯಿಸಿದ್ದಾರೆ. ಅವರ ದೂರವಾಣಿ ಸಂಖ್ಯೆ: 9880078371

ಕಕ್ಕಬ್ಬೆ ಮರಂದೋಡ ವ್ಯಾಪ್ತಿಯಲ್ಲಿ ಸುಮಾರು 13 ಮನೆಗಳು ಕುಸಿದು ಅತಂತ್ರವಾಗಿರುವ 25 ನಿರಾಶ್ರಿತರಿಗೆ ತಕ್ಷಣ ಜಿಲ್ಲಾಡಳಿತ ಮರಂದೋಡ ಸ.ಕಿ.ಪ್ರಾ.ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಬೇಕೆಂದು ಗ್ರಾಮಸ್ಥರ ಪರವಾಗಿ ಚಂಡಿರ ಜಗದೀಶ್ ಒತ್ತಾಯಿಸಿದ್ದಾರೆ. ಅವರ ದೂರವಾಣಿ : 9731410184.

-ದುಗ್ಗಳ