ನಾಪೆÇೀಕ್ಲು, ಆ. 10: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆಯಿಂದ ಮಳೆ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಇಳಿಮುಖ ಕಂಡು ಬಂದಿದೆ. ಕೊಟ್ಟಮುಡಿ ಕಾವೇರಿ ನದಿಯಲ್ಲಿ ಉಂಟಾದ ಪ್ರವಾಹದಿಂದ ನಾಪೆÇೀಕ್ಲು – ಮಡಿಕೇರಿ, ನಾಪೆÇೀಕ್ಲು – ಮೂರ್ನಾಡು ಹಾಗೂ ಕಕ್ಕಬೆ ಹೊಳೆಯ ಪ್ರವಾಹದ ಕಾರಣ ಕೈಕಾಡುವಿನಲ್ಲಿ ಪ್ರವಾಹ ಉಂಟಾಗಿ ನಾಪೆÇೀಕ್ಲು - ಪಾರಾಣೆ ರಸ್ತೆ ಸಂಚಾರ ಕಡಿತಗೊಂಡಿರುವದು ಹಾಗೇ ಮುಂದುವರಿದಿದೆ. ಉಳಿದಂತೆ ನಾಪೆÇೀಕ್ಲು – ಕಕ್ಕಬೆ – ವೀರಾಜಪೇಟೆ ಮಾರ್ಗದ ಕೋಟೇರಿ ಹಾಗೂ ಕಕ್ಕಬೆ ಪಟ್ಟಣದಲ್ಲಿ ಪ್ರವಾಹ ಕಡಿಮೆಯಾದ ಹಿನೆÀ್ನಲೆಯಲ್ಲಿ ವಾಹನ ಸಂಚಾರ ಪುನರಾರಂಭಗೊಂಡಿದೆ. ಕಕ್ಕಬೆಯಿಂದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ತೆರಳುವ ರಸ್ತೆಯಲ್ಲಿ ಪ್ರವಾಹ ಕಡಿಮೆಯಾಗಿರುವದಾಗಿ ತಿಳಿದು ಬಂದಿದೆ. ಕೊಳಕೇರಿ – ಕುಂಜಿಲ ಸಂಪರ್ಕ ರಸ್ತೆಯು ಸಂಚಾರಕ್ಕೆ ಮುಕ್ತವಾಗಿದೆ. ಉಳಿದಂತೆ ನಾಪೆÇೀಕ್ಲು - ಭಾಗಮಂಡಲ ಮುಖ್ಯ ರಸ್ತೆಯ ಬಲ್ಲಮಾವಟಿ, ಪುಲಿಕೋಟು, ಅಯ್ಯಂಗೇರಿಯಲ್ಲಿ ರಸ್ತೆಯಲ್ಲಿ ಪ್ರವಾಹ ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ.

ಪುನರ್ವಸತಿ ಕೇಂದ್ರ: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ನಾಪೆÇೀಕ್ಲು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪುನರ್ವಸತಿ ಕೇಂದ್ರವನ್ನು ಆರಂಭಿಸಲಾಗಿದ್ದು, ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಸ್ಥಳಕ್ಕೆ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಮತ್ತು ಸದಸ್ಯರು ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳಿದರು.

ಜಲಾವೃತವಾದ ಗದ್ದೆಗಳು: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಭತ್ತದ ನಾಟಿ ಮಾಡಿದ ಎಲ್ಲಾ ಭತ್ತದ ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ನಷ್ಟ ಸಂಭವಿಸಿದೆ. ನಾಟಿಗೆಂದು ತೆಗೆದಿರಿಸಲಾಗಿದ್ದ ಪೈರಿನ ಕಂತೆಗಳು ಪ್ರವಾಹಕ್ಕೆ ಸಿಲುಕಿ ನಾಲ್ಕೈದು ಕಿ.ಮೀ ದೂರದ ರಸ್ತೆಯ ಬದಿಯ ಬೇಲಿಗಳಲ್ಲಿ ಗೋಚರಿಸುತ್ತಿವೆ.

ಮಣ್ಣು ಕುಸಿತ: ಭಾರೀ ಮಳೆಯ ಕಾರಣದಿಂದ ರಸ್ತೆ ಬದಿ ಸೇರಿದಂತೆ ಗದ್ದೆ, ಮನೆ, ತೋಟ, ಎಲ್ಲಾ ಕಡೆಗಳಲ್ಲಿ ಮಣ್ಣು ಕುಸಿತ ಕಂಡು ಬಂದಿದ್ದು, ಅಲ್ಲಲ್ಲಿ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಮನೆ ಕುಸಿತ: ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೆಕಾಡು ಎಂಬಲ್ಲಿ ಕಾವೇರಿ ನದಿ ಪ್ರವಾಹದಿಂದ ಅಬೂಬಕರ್ ಎಂಬವರ ಮನೆ ಸಂಪೂರ್ಣವಾಗಿ ಕುಸಿದು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕತ್ತಲೆಯಲ್ಲಿ ನಾಪೆÇೀಕ್ಲು: ಕಳೆದ ಮೂರು ದಿನಗಳಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೆ ಕತ್ತಲು ಆವರಿಸಿಕೊಂಡಿದೆ. ಎಲ್ಲಿ ಹೋದರೂ ಮರದ ಕೊಂಬೆ ಬಿದ್ದು, ಮರ ಬಿದ್ದು ವಿದ್ಯುತ್ ಕಂಬಗಳು, ತಂತಿಗಳು ರಸ್ತೆಯಲ್ಲಿ ಬಿದ್ದಿರುವದು ಕಂಡುಬರುತ್ತಿದೆ. ಅದರೊಂದಿಗೆ ಬಿಎಸ್‍ಎನ್‍ಎಲ್, ಜಿಯೋ ನೆಟ್‍ವರ್ಕ್ ಇಲ್ಲದಿರುವದು ಸಾರ್ವಜನಿಕರಿಗೆ ಕಷ್ಟ - ನಷ್ಟಗಳನ್ನು ಹಂಚಿಕೊಳ್ಳಲು ಹಾಗೂ ಕೇಳಿ ತಿಳಿದುಕೊಳ್ಳಲು ಸಾಧ್ಯವಿಲ್ಲದ್ದಾಗಿದ್ದು, ಸಂಬಂಧಿಸಿದವರು ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. -ಪಿ.ವಿ.ಪ್ರಭಾಕರ್