ಪೊನ್ನಂಪೇಟೆ, ಆ. 10 : ಪ್ರವಾಹದ ನಡುವೆ ಬಿದಿರು ಕಣಿಲೆ ಕೊಯ್ಲು ಮಾಡಲು ತೆರಳಿದ್ದ ಕಾರ್ಮಿಕ ಕೆರೆಗೆ ಜಾರಿ ಬಿದ್ದು ಸಾವನಪ್ಪಿರುವ ಘಟನೆ ಹುದೂರು ಗ್ರಾಮದಲ್ಲಿ ನಡೆದಿದೆ. ಸುಬ್ರಮಣಿ (50) ಮೃತ ಕಾರ್ಮಿಕ.
ಹುದೂರು ಗ್ರಾಮದ ಮಂಜುವಂಡ ಅರುಣ್ ಎಂಬವರ ಕೆರೆಯಲ್ಲಿ ಶವ ಪತ್ತೆಯಾಗಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದೆ. ಮನೆಯಿಂದ ಕಣಿಲೆ ಕೊಯ್ಲು ಮಾಡಲು ಹೋಗುವದಾಗಿ ತೆರಳಿದ್ದ ಸುಬ್ರಮಣಿ, ಮನೆಗೆ ಹಿಂತಿರುಗಿರಲಿಲ್ಲ. ಕೆರೆಯಲ್ಲಿ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ನೀಡಲಾಯಿತು.
-ಚನ್ನನಾಯಕ