ಶನಿವಾರಸಂತೆ, ಆ. 10: ಕೊಡ್ಲಿಪೇಟೆ ನಾಡ ಕಚೇರಿಯಲ್ಲಿ ಹಲವಾರು ತಿಂಗಳುಗಳಿಂದ ಖಾಲಿ ಇದ್ದ ಕಂದಾಯ ನಿರೀಕ್ಷಕರ ಹುದ್ದೆಗೆ ಎನ್.ಜೆ. ಮನು ಕುಮಾರ್ ನೇಮಕಗೊಂಡಿದ್ದಾರೆ.
ನೀರುಗುಂದ ಗ್ರಾಮದ ಮನು ಕುಮಾರ್ 2003 ರಿಂದ ಗ್ರಾಮ ಲೆಕ್ಕಿಗರಾಗಿ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಕೊಡ್ಲಿಪೇಟೆಯಲ್ಲಿ ಕಂದಾಯ ನಿರೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.